ಡಿಸ್ಕವರಿಯಲ್ಲಿ ಕ್ಯೂರಿಯಾಸಿಟಿ

7

ಡಿಸ್ಕವರಿಯಲ್ಲಿ ಕ್ಯೂರಿಯಾಸಿಟಿ

Published:
Updated:

ನಾವು ಶಾಶ್ವತವಾಗಿ ಜೀವಿಸುವಂತಾದರೆ ಏನಾಗುತ್ತದೆ? ನಮ್ಮ ವಿಶ್ವದಂತಹ ಮತ್ತೊಂದು ವಿಶ್ವ ಅಸ್ತಿತ್ವದಲ್ಲಿ ಇದೆಯೇ? ದೇವರು ಜಗತ್ತನ್ನು ಸೃಷ್ಟಿಸಿದನೇ? ಅನ್ಯಗ್ರಹ ಜೀವಿಗಳು ನಮ್ಮ ಮೇಲೆ ದಾಳಿ ನಡೆಸಿದರೆ ಏನಾದಿತು ? ಜಗತ್ತಿನ ಅಂತ್ಯ ಹೇಗಾಗುತ್ತದೆ?ಇವೆಲ್ಲ ಜನಸಾಮಾನ್ಯರನ್ನೂ ಕಾಡುವ ಉತ್ತರವಿಲ್ಲದ ಪ್ರಶ್ನೆಗಳು. ಸದಾ ಸಾಹಸಮಯ, ಕುತೂಹಲಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಡಿಸ್ಕವರಿ ಚಾನೆಲ್ ಈ ಕುತೂಹಲ ತಣಿಸುವ ಕೆಲಸಕ್ಕೆ ಮುಂದಾಗಿದೆ. ಸೋಮವಾರದಿಂದ ಆರಂಭವಾಗಲಿರುವ `ಕ್ಯೂರಿಯಾಸಿಟಿ~ ಸರಣಿಯಲ್ಲಿ ಇಂತಹ ವಿಚಾರಗಳನ್ನು ಇಟ್ಟುಕೊಂಡು ಚರ್ಚಿಸಲಾಗುತ್ತದೆ.

ವಿಶ್ವವಿಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್, ನಟ ರಾಬಿನ್ ವಿಲಿಯಮ್ಸ, ಅವತಾರ್ ಚಿತ್ರದ ತಾರೆ ಮೈಕಲ್ ರೊಡ್ರಿಗ್ರಸ್ ಮುಂತಾದವರೆಲ್ಲ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಡಿಸ್ಕವರಿ ಚಾನೆಲ್‌ನಲ್ಲಿ ಅಕ್ಟೋಬರ್ 17ರಿಂದ ಪ್ರತಿ ಸೋಮವಾರ ರಾತ್ರಿ 8ಕ್ಕೆ ಈ ಸರಣಿ ಪ್ರಸಾರವಾಗಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry