ಶನಿವಾರ, ಏಪ್ರಿಲ್ 17, 2021
27 °C

ಡಿಸ್ಕಸ್ ಎಸೆತ: ಫೈನಲ್‌ಗೆ ವಿಕಾಸ್ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಸೋಮವಾರ ನಡೆದ ಪುರುಷರ ಡಿಸ್ಕಸ್ ಎಸೆತದಲ್ಲಿ ಭಾರತದ ವಿಕಾಸ್ ಗೌಡ ಅವರು ಫೈನಲ್ ಸುತ್ತಿಗೆ ಪ್ರವೇಶಿಸಿದರು.ಅನಿವಾಸಿ ಭಾರತೀಯರಾದ ವಿಕಾಸ್ ಗೌಡ ಅವರು ತಮ್ಮ ಎರಡನೇಯ ಪ್ರಯತ್ನದಲ್ಲಿ 65.20ಮೀಟರ್ ದೂರ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದರು.ಅಂತಿಮ ಸುತ್ತಿನಲ್ಲಿ ವಿಕಾಸ್ ಗೌಡ ಸೇರಿದಂತೆ 12 ಜನ ಅಗ್ರ ಸ್ಫರ್ಧಿಗಳಿದ್ದು, ಫೈನಲ್ ಮಂಗಳವಾರ ನಡೆಯಲಿದೆ.

 

ವಿಕಾಸ್ ಅವರ ಈ ಸಾಧನೆಯಿಂದ ಭಾರತಕ್ಕೆ ಮತ್ತೊಂದು ಪದಕದ ಆಸೆ ಮೂಡಿದಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.