ಮಂಗಳವಾರ, ಏಪ್ರಿಲ್ 20, 2021
25 °C

ಡಿಸ್ನಿ; ಜೆಟ್ ಸೆಟ್ ಗೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳು ಮತ್ತು ಕೌಟುಂಬಿಕ ಮನೋರಂಜನೆಗೆ ಹೆಸರು ವಾಸಿ ಡಿಸ್ನಿ ಚಾನೆಲ್. ಈಗ ಡಿಸ್ನಿ ಚಾನೆಲ್ ಜೆಟ್ ಏರ್‌ವೇಸ್ ಜತೆಗೂಡಿ ಡಿಸ್ನಿ ಪಾತ್ರಗಳ ಚಿತ್ರಗಳನ್ನು ಒಳಗೊಂಡ ವಿಮಾನವೊಂದನ್ನು ಪರಿಚಯಿಸಿದೆ.ಡಿಸ್ನಿಯ ಮಿಕಿ ಮೌಸ್, ಮಿನಿ ಮೌಸ್, ಡೊನಾಲ್ಡ್ ಡಕ್, ಡೈಸಿ, ಗೂಫಿ ಮತ್ತು ಪ್ಲುಟೋ ಚಿತ್ರಗಳನ್ನೊಳಗೊಂಡ ಈ ವರ್ಣರಂಜಿತ ವಿಮಾನದ ಅನಾವರಣದ ಸಂದರ್ಭದಲ್ಲಿ ಮಿಕಿ ಮೌಸ್ ಮತ್ತು ಮಿನಿ ಮೌಸ್ ಹಾಜರಿದ್ದವು. ಡಿಸ್ನಿ ಚಾನೆಲ್‌ನಲ್ಲಿ ಬರುವ  ಜೆಟ್ ಸೆಟ್ ಗೋ  ಕುರುಹಾಗಿ ಈ ವಿಮಾನವನ್ನು ಅನಾವರಣಗೊಳಿಸಲಾಗಿದೆ.ಮಿಕಿ ಮತ್ತು ಮಿನಿಯ ಜೊತೆಗೆ ಸ್ಥಳೀಯವಾಗಿ ನಿರ್ಮಾಣಗೊಳ್ಳುತ್ತಿರುವ ಡಿಸ್ನಿ ಚಾನೆಲ್‌ನ ಬೆಸ್ಟ್ ಆಫ್ ಲಕ್ ನಿಕ್ಕಿ, ಸೂಟ್ ಲೈಫ್ ಆಫ್ ಕರಣ್ ಆಂಡ್ ಕಬೀರ್ ಮತ್ತು ಆರ್ಟ್ ಅಟ್ಯಾಕ್‌ನ ಸಂಪೂರ್ಣ ಪಾತ್ರಗಳು ಇಲ್ಲಿ ಸೇರಿದ್ದವು. ಮನೋರಂಜನಾ ತಾಣಗಳಲ್ಲಿ ಆಗ್ರಸ್ಥಾನ ಪಡೆದಿರುವ ಹಾಂಕಾಂಗ್‌ನ ಡಿಸ್ನಿ ರೆಸಾರ್ಟ್‌ಗೆ ಹೋಗುವ ಅವಕಾಶ ಪಡೆದಿರುವ 37 ಮಂದಿ ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಇವರೆಲ್ಲರೂ ಅಭಿನಂದನೆ ಸಲ್ಲಿಸಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.