ಡಿಸ್ನಿ ಸ್ಟಾರ್ ಪುಟಾಣಿಗಳ ಹರ್ಷಾರವ

7

ಡಿಸ್ನಿ ಸ್ಟಾರ್ ಪುಟಾಣಿಗಳ ಹರ್ಷಾರವ

Published:
Updated:

ಬಿರುಬಿಸಿಲು... ಸಾಲುಗಟ್ಟಿ ನಿಂತ ಮಕ್ಕಳು, ಪೋಷಕರ ಮುಖದಲ್ಲಿ ಸ್ವಲ್ಪ ಖುಷಿ, ಅಲ್ಪ ಕಹಿ. ಹಣೆಯಲ್ಲಿ ಮೂಡಿದ ನಿರೀಕ್ಷೆಯ ಸುಕ್ಕುಗಳಿಂದ  ಇಳಿಯುವ ಬೆವರ ಹನಿಗಳ ಜತೆ ಸೋತವರ ಕಣ್ಣ ಹೊಳಪು ಕರಗಿ ಹೋಗುತ್ತಿದೆ. ಕೊನೆಯ ಆಡಿಷನ್‌ನಲ್ಲಿ ಗೆಲುವಿನ ನಗೆಯನ್ನು ಚಿಮ್ಮುತ್ತಿದ್ದ ಮಕ್ಕಳು. ಸೋತವರಿಗೆ ಹಿರಿಯರ ಸಾಂತ್ವನದ ತಂಗಾಳಿ...

  ‘ ಡಿಸ್ನಿ ಚಾನೆಲ್ ಶೂಟಿಂಗ್ ಸ್ಟಾರ್’ಗಾಗಿ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾನ್ವೇಷಣೆ   ಕಾರ್ಯಕ್ರಮದ ಸಂದರ್ಭದಲ್ಲಿ  ಕಾಣಿಸಿದ ದೃಶ್ಯಗಳು ಇವು.ಡಿಸ್ನಿ ಚಾನೆಲ್‌ನ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ‘ಡಿಸ್ನಿ ಚಾನೆಲ್ ಶೂಟಿಂಗ್ ಸ್ಟಾರ್ಸ್‌’ಗೆ ನಗರದ 2500ಕ್ಕೂ ಹೆಚ್ಚು ಮಕ್ಕಳಿಗೆ ಪೂರ್ವ ಪರೀಕ್ಷೆ ನಡೆಸಲಾಯಿತು.ನಟನೆ, ಹಾಡುಗಾರಿಕೆ, ಉಪಕರಣ ಸಂಗೀತ, ನೃತ್ಯ, ಹಾಸ್ಯಪ್ರಸಂಗಗಳ ಪ್ರದರ್ಶನ ನೀಡಲು ಮಕ್ಕಳನ್ನು ಆಹ್ವಾನಿಸಲಾಯಿತು.ವಿಜೇತ ಮಕ್ಕಳು ಡಿಸ್ನಿ ಚಾನೆಲ್ ಭಾರತದಲ್ಲಿ ನಿರ್ಮಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.ದೇಶದದ್ಯಾಂತ ಡಿಸ್ನಿ ಚಾನೆಲ್ ತೀರ್ಪುಗಾರರು ದೇಶದಾದ್ಯಂತ ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಿದ್ದು, ಅಭ್ಯರ್ಥಿಗಳಿಗೆ ಸಂಗೀತ ಸಂಯೋಜಕ ಸಲೀಂ-ಸುಲೈಮಾನ್ ಮತ್ತು ನಟಿ ರವೀನಾ ಟಂಡನ್ ವೇದಿಕೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಡಿಸ್ನಿ ಚಾನೆಲ್ ಈ ವಿನೂತನ ಕಾರ್ಯಕ್ರಮದ ಮೂಲಕ ದೇಶದೆಲ್ಲೆಡೆಯ ಮಕ್ಕಳಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದೆ. ಡಿಸ್ನಿ ಕಥೆಗಳು ಮತ್ತು ಪಾತ್ರಗಳು ಚಾನೆಲ್‌ನ ವೈಶಿಷ್ಟ್ಯ. ಪ್ರಸ್ತುತ ಕಾರ್ಯಕ್ರಮದ ಮೂಲಕ ಪುಟಾಣಿಗಳ ಕನಸು ನನಸಾಗಿಸುವ ವೇದಿಕೆ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಡಿಸ್ನಿ ಟೆಲಿವಿಷನ್‌ನ ಇಂಟರ್‌ನ್ಯಾಷನಲ್ ಇಂಡಿಯಾ ಉಪಾಧ್ಯಕ್ಷರಾದ ನತಾಶಾ ಮಲ್ಹೋತ್ರ ಹೇಳುತ್ತಾರೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಅರ್ಜಿಗಳಿಗಾಗಿ www.disney.in/disneychannel ವೆಬ್ ಸೈಟ್ ಗಮನಿಸಬಹುದು.

 ಅರ್ಜಿಯನ್ನು ಡೌನ್ ಲೋಡ್ ಮಾಡಿ ಭರ್ತಿಮಾಡಿ ಜತೆಯಲ್ಲಿ ಮೂರು ನಿಮಿಷಗಳ ಅವಧಿಯ ವಿಡಿಯೋದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.  ಅರ್ಜಿಗಳನ್ನು ಪೋಸ್ಟ್ ಬಾಕ್ಸ್16301 ಸನ್ ಮಿಲ್ ಕಾಂಪೌಂಡ್, ಲೋಯರ್ ಪರೇಲ್ ಮುಂಬೈಗೆ ಕಳುಹಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry