ಡಿ.5ರಂದು ದೇವಾಲಯ ಉದ್ಘಾಟನೆ

7

ಡಿ.5ರಂದು ದೇವಾಲಯ ಉದ್ಘಾಟನೆ

Published:
Updated:

ದೊಡ್ಡಬಳ್ಳಾಪುರ:ತಾಲ್ಲೂಕಿನ ಮಧುರೆ ಹೋಬಳಿ ಗಂಡರಗೂಳಿಪುರ ಗ್ರಾಮದಲ್ಲಿ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭ ಡಿ.5 ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.

ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ, ಬೆಂಗಳೂರಿನ ವಿವೇಕಾನಂದ ಆಶ್ರಮದ ತ್ಯಾಗಿನಂದ ಮಹಾರಾಜ್ ಸಾನಿಧ್ಯ ವಹಿಸುವರು.

ಮಾಜಿ ಸಚಿವ ಸಿ.ಚನ್ನಿಗಪ್ಪ ದೇವಾಲಯ ಉದ್ಘಾಟಿಸುವರು. ಶಾಸಕ ಜೆ.ನರಸಿಂಹಸ್ವಾಮಿ  ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರಂಗಶಾಮಯ್ಯ, ಸೂಪರಿಂಟಿಂಡೆಂಟ್ ಎಂಜಿನಿಯರ್ ಎಂ.ರಂಗಧಾಮಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅನ್ನಪೂರ್ಣ ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry