ಡಿ.7ರಿಂದ ಕುಪ್ಪಳಿಯಲ್ಲಿ ಕಥಾ ಕಮ್ಮಟ

7

ಡಿ.7ರಿಂದ ಕುಪ್ಪಳಿಯಲ್ಲಿ ಕಥಾ ಕಮ್ಮಟ

Published:
Updated:

ಬೆಂಗಳೂರು: ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಡಿಸೆಂಬರ್ 7ರಿಂದ ಮೂರು ದಿನಗಳ ಕಥಾ ಕಮ್ಮಟವನ್ನು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಆಯೋಜಿಸಲಾಗಿದೆ.ಭಾಷಾತಜ್ಞ ಡಾ.ಕೆ.ವಿ. ನಾರಾಯಣ ಕಮ್ಮಟದ ನಿರ್ದೇಶಕರಾಗಿರುತ್ತಾರೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ಉಚಿತ ಊಟ, ವಸತಿ ಹಾಗೂ ಅಧ್ಯಯನ ಸಾಮಗ್ರಿ ನೀಡಲಾಗುವುದು. ಪ್ರವೇಶ ಶುಲ್ಕ ಇರುವುದಿಲ್ಲ.

ಆಸಕ್ತರು ಸ್ವವಿವರಗಳನ್ನು ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ನಂ. 90, 16ನೇ ಅಡ್ಡರಸ್ತೆ, 4ನೇ ಹಂತ, ಜೆ.ಪಿ.ನಗರ, ಬೆಂಗಳೂರು- 560 078 ಅಥವಾ ಇ-ಮೇಲ್ ಮೂಲಕ drbrtrust @gmail.com.   ಅರ್ಜಿ ಸಲ್ಲಿಸಲು ನ. 10 ಕಡೆಯ ದಿನ. ಮಾಹಿತಿಗೆ 99803 05837 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry