ಡೀಸೆಲ್, ಪೆಟ್ರೋಲ್ ಖರೀದಿ ಸ್ಥಗಿತ ಎಚ್ಚರಿಕೆ

7

ಡೀಸೆಲ್, ಪೆಟ್ರೋಲ್ ಖರೀದಿ ಸ್ಥಗಿತ ಎಚ್ಚರಿಕೆ

Published:
Updated:

ಚಿಕ್ಕಮಗಳೂರು: ಅಪೂರ್ವಚಂದ್ರ ಆಯೋಗದ ವರದಿ ಜಾರಿ ಗೊಳಿಸಲು ಒತ್ತಾಯಿಸಿ ಅಕ್ಟೋಬರ್ 1 ಮತ್ತು 2ರಂದು ಪೆಟ್ರೋಲ್‌ಬಂಕ್‌ಗಳು ಡೀಸೆಲ್ ಮತ್ತು ಪೆಟ್ರೋಲ್ ಖರೀದಿ ಸ್ಥಗಿತಗೊಳಿಸಲು ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಷನ್ ತೀರ್ಮಾ ನಿಸಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.ಕಂಪೆನಿಗಳಿಂದ ಇಂಧನ ಖರೀದಿ ಯನ್ನು ಎರಡು ದಿನಗಳ ಕಾಲ ಮಾತ್ರ ತಾತ್ಕಾಲಿಕ ನಿಲ್ಲಿಸಲಾಗುತ್ತದೆಯೇ ಹೊರತು ವಾಹನಗಳಿಗೆ ಇಂಧನ ತುಂಬಿ ಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾದರೆ ಅಕ್ಟೋಬರ್ 15ರ ನಂತರ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ಪಾಳಿಯಲ್ಲಿ ಮಾತ್ರ ಅಂದರೆ ಬೆಳಿಗ್ಗೆಯಿಂದ ಸಂಜೆವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ನಡೆಸಲಾ ಗುವುದು. ರಾತ್ರಿ ವೇಳೆ ಮಾರಾಟ ಸ್ಥಗಿತಗೊಳಿಸಲು ಅಸೋಸಿಯೇಷನ್ ಮುಖಂಡರು ನಿರ್ಧರಿಸಿದ್ದಾರೆಂದು ಹೇಳಿದರು.ಪೆಟ್ರೋಲ್ ಬಂಕ್ ಮಾಲೀಕರು ಇಂಧನ ಮಾರಾಟದಿಂದ ಬರುವ ಕಮೀಷನ್ ಮೇಲೆ ಜೀವನ ಸಾಗಿಸುವಂತಾಗಿದೆ. ಬಂಕ್ ಮಾಲೀಕರ ಸಮಸ್ಯೆ ಅರಿಯಲು ಸರ್ಕಾರ 2010ರ ಸೆಪ್ಟೆಂಬರ್ 22ರಂದು ಅಪೂರ್ವ ಚಂದ್ರ ಆಯೋಗ ನೇಮಿಸಿತು. ಆಯೋಗವು 2011ರ ಅಕ್ಟೋಬರ್ 14ರಂದು ವರದಿ ಸಲ್ಲಿಸಿತು. ಕಳೆದ ಒಂದು ವರ್ಷದಿಂದ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರ ಮುಂದಾಗದಿರುವುದರಿಂದ ಕಂಪೆನಿಗಳ ಮೂಲಕ ಇಂಧನ ಖರೀದಿಯನ್ನು ಎರಡು ದಿನಗಳು ಮಾತ್ರ ಸ್ಥಗಿತಗೊಳಿಸಿ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.ಈಗ ಶೇ.2ರಷ್ಟು ಮಾತ್ರ ಕಮಿಷನ್ ನೀಡಲಾಗುತ್ತಿದೆ. ಶೇ.5ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗಿತ್ತು. ಆದರೆ ಶೇ.3ರಷ್ಟು ಕಮಿಷನ್ ನೀಡಲು ಆಯೋಗ ತನ್ನ ವರದಿ ಸಲ್ಲಿಸಿದೆ. ಆರು ತಿಂಗಳಿಗೊಮ್ಮೆ ಕಮಿಷನ್ ಹೆಚ್ಚಿಸುವಂತೆ ತಿಳಿಸಲಾಗಿದೆ ಎಂದರು. ಅಸೋಸಿಯೇಷನ್ ಮುಖಂಡ ರಾದ ವಾಸುದೇವಮೂರ್ತಿ ಮತ್ತು ಭುವನೇಶ್ವರ್ ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry