ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಲು ವಿರೋಧ

7

ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಲು ವಿರೋಧ

Published:
Updated:
ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಲು ವಿರೋಧ

ಬೆಂಗಳೂರು: ಡೀಸೆಲ್ ಬೆಲೆಯನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವುದರಿಂದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಉತ್ಪಾದನಾ ವೆಚ್ಚ ಹೆಚ್ಚಳಗೊಂಡು ರಫ್ತು ವಹಿವಾಟಿಗೂ ತೀವ್ರ ಧಕ್ಕೆ ಒದಗಲಿದೆ ಎಂದು ಭಾರತದ ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ (ಎಫ್‌ಐಇಒ) ರಫೀಕ್ ಅಹ್ಮದ್ ಆತಂಕ ವ್ಯಕ್ತಪಡಿಸಿದ್ದಾರೆ.ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಬೇಕು ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿಯು   ಶಿಫಾರಸು ಮಾಡಿರುವ ಸಂದರ್ಭವೇ ಚರ್ಚಾಸ್ಪದವಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ಭವಿಸಿರುವ ರಾಜಕೀಯ ಅನಿಶ್ಚಿತತೆ ಕಾರಣಕ್ಕೆ ತೈಲ ಬೆಲೆ ಕಡಿಮೆಯಾಗುವ ಸಾಧ್ಯತೆಗಳು ತುಂಬ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಿದರೆ ಅದರಿಂದ ಹಣದುಬ್ಬರ ಇನ್ನಷ್ಟು ಹೆಚ್ಚಳಗೊಳ್ಳುತ್ತದೆ.  ವಿದ್ಯುತ್ ಪೂರೈಕೆ  ಪರಿಸ್ಥಿತಿ ಈಗಾಗಲೇ ಸಾಕಷ್ಟು ಹದಗೆಟ್ಟಿರುವುದರಿಂದ ವಿದ್ಯುತ್‌ಗಾಗಿ ಡೀಸೆಲ್ ನೆಚ್ಚಿಕೊಂಡಿರುವ ಉದ್ದಿಮೆಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಕಠಿಣ ಹಣಕಾಸು ನೀತಿಯ ಫಲವಾಗಿ ಈಗಾಗಲೇ ಸಾಲ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗಿ ಉತ್ಪಾದನೆ ಕುಂಠಿತಗೊಂಡಿದೆ. ತೆರಿಗೆ ಹೆಚ್ಚಳ ಮತ್ತು ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸುವುದರಿಂದ  `ಎಂಎಸ್‌ಎಂಇ~ ವಲಯದ ಸಂಕಷ್ಟ ಇನ್ನಷ್ಟು ಹೆಚ್ಚಲಿದೆಯಷ್ಟೆ. ಹೀಗಾಗಿ ನೀತಿ ನಿರೂಪಕರು ನಿರ್ಧಾರ ಕೈಗೊಳ್ಳುವ ಮುನ್ನ ಹೆಚ್ಚಿನ ಜಾಣ್ಮೆ ಪ್ರದರ್ಶಿಸಬೇಕಾಗಿದೆ ಎಂದೂ ರಫೀಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry