ಡೆಂಗೆಗೆ ಮಹಿಳೆ ಬಲಿ

ಮಂಗಳವಾರ, ಜೂಲೈ 23, 2019
20 °C

ಡೆಂಗೆಗೆ ಮಹಿಳೆ ಬಲಿ

Published:
Updated:

ದಾವಣಗೆರೆ: ಮಹಿಳೆಯೊಬ್ಬರು ಡೆಂಗೆ ಜ್ವರದಿಂದ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ತೊಳಹುಣಸೆಯಲ್ಲಿ ಈಚೆಗೆ ನಡೆದಿದೆ.ಜಯಮ್ಮ (45) ಮೃತಪಟ್ಟ ಮಹಿಳೆ. ರದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜುಲೈ 8ರಂದು ಮೃತಪಟ್ಟಿದ್ದಾರೆ. ವರದಿಯಲ್ಲಿ ಡೆಂಗೆ ಜ್ವರ ಎಂದು ತಿಳಿದುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಮಿತ್ರಾದೇವಿ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ಶಂಕಿತ ಡೆಂಗೆಗೆ ಬಾಲಕಿ ಬಲಿ: ಶಂಕಿತ ಡೆಂಗೆಜ್ವರಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಬಡಾವಣೆಯ ನಾಗರತ್ನಾ ಎನ್ನುವವರ ಪುತ್ರಿ ಯಶಸ್ವಿನಿ (6) ಮೃತಪಟ್ಟ ಬಾಲಕಿ.ಕೆಲ ದಿನಗಳ ಹಿಂದೆ ಈ ಬಾಲಕಿಗೆ ಜ್ವರ ಕಾಣಿಸಿಕೊಂಡಿತ್ತು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಬಾಲಕಿ ಡೆಂಗೆಜ್ವರದಿಂದ ಸಾವಿಗೀಡಾಗಿದ್ದಾಳೆ ಎಂದು ಚಿಕಿತ್ಸೆ ನೀಡಿದ ವೈದ್ಯರು ದೃಢಪಡಿಸಿದ್ದಾರೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.ಡಿಎಚ್‌ಒ ಪ್ರತಿಕ್ರಿಯೆ: ಯಶಸ್ವಿನಿ ಎಂಬ ಬಾಲಕಿ ಶಂಕಿತ ಡೆಂಗೆಯಿಂದ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಸಂಪೂರ್ಣ ವರದಿ ಸಿಕ್ಕಿದ ನಂತರ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.ಆಕ್ರೋಶ: ನಗರದಲ್ಲಿ ನಗರದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇದು, ಸಾಂಕ್ರಾಮಿಕ ರೋಗಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದರೂ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ, ನಗರಪಾಲಿಕೆ ಹಾಗೂ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry