ಮಂಗಳವಾರ, ಮೇ 11, 2021
27 °C

ಡೆಂಗೆ ಜ್ವರಕ್ಕೆ ಚಿಕ್ಕೋಡಿಯ ಯುವತಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಕಾರದಗಾ ಗ್ರಾಮದ ಯುವತಿಯೊಬ್ಬಳು ಡೆಂಗೆ ಜ್ವರದಿಂದ ಬಳಲಿ ಸಾವನ್ನಪ್ಪಿದ ಘಟನೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದೆ.ಮೃತಳನ್ನು ಅರ್ಚನಾ ಶಶಿಕಾಂತ ಕಾಂಬಳೆ (19) ಎಂದು ಗುರುತಿಸಲಾಗಿದೆ. `ಅರ್ಚನಾ ಕಳೆದ ಏ. 14ರಿಂದ  ಜ್ವರದಿಂದ ಬಳಲುತ್ತಿದ್ದರು. ತಮ್ಮ ತಾಯಿಯ ತವರೂರಾದ ಮಹಾರಾಷ್ಟ್ರದ ಇಚಲಕರಂಜಿ ತಾಲ್ಲೂಕಿನ ಪೇಠ ವಡಗಾಂವ್ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣಮುಖರಾಗಲಿಲ್ಲ. ಇವರ ಸಂಬಂಧಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿದ್ದು, ಅವರು ಮೇ 30ರಂದು ಬಿಮ್ಸಗೆ ದಾಖಲಿಸಿದ್ದರು.ಆದರೆ ಶನಿವಾರ ಯುವತಿ ಮೃತಪಟ್ಟಿದ್ದಾಳೆ. ರಕ್ತ ತಪಾಸಣೆ ಮಾಡಲಾಗಿದ್ದು, ಡೆಂಗೆ ಎಂದು ಶಂಕಿಸಲಾಗಿದೆ' ಎಂದು ಹೆಚ್ಚುವರಿ ಆರೋಗ್ಯಾಧಿಕಾರಿ ಡಾ.ವಿ.ಬಿ. ಕುಲಕರ್ಣಿ ಭಾನುವಾರ `ಪ್ರಜಾವಾಣಿ' ಗೆ ತಿಳಿಸಿದರು. ಕಾರದಗಾ ಗ್ರಾಮದ ರೋಹಿದಾಸ ಚಂಬಾರ (21) ಅವರನ್ನು ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಡೆಂಗೆ ಜ್ವರ ಇರಬಹುದು ಎಂದು ಶಂಕಿಸಲಾಗಿದೆ. ಆದರೆ, ರಕ್ತ ತಪಾಸಣೆಗೆ ಕಳುಹಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.