ಡೆಂಗೆ ಜ್ವರ: ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚನೆ

7

ಡೆಂಗೆ ಜ್ವರ: ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚನೆ

Published:
Updated:

ಮುದ್ದೇಬಿಹಾಳ: ಮಾರಕ ರೋಗ ಡೆಂಗೆ ಜ್ವರ ಬಾರದಂತೆ  ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೋಜ ಗಿಡಗಂಟಿ ಹೇಳಿದರು.ತಾಲ್ಲೂಕಿನ ಕೋಳೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಹಮ್ಮಿ ಕೊಂಡಿದ್ದ ಮಾಹಿತಿ-ಶಿಕ್ಷಣ-ಸಂವಹನ ಕಾರ್ಯಕ್ರಮದಲ್ಲಿ ಡೆಂಗೆ ಜ್ವರದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ನಿಯಂತ್ರಣ ಕ್ರಮಗಳಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಅರಿವು ಮೂಡಿಸಿದರು.ಆರೋಗ್ಯ ಮೇಲ್ವಿಚಾರಕರಾದ ಎ.ಸಿ.ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಗ್ರಾಮ ಪಂಚಾಯಿತಿ ಅಧ್ಯಕ್ಷ ದಂಡಪ್ಪ  ಬ್ಯಾಲ್ಯಾಳ ಕಾರ್ಯಕ್ರಮ ಉದ್ಘಾಟಿಸಿದರು.  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್. ಪಾಟೀಲ ಪಂಚಾಯಿತಿ ವತಿಯಿಂದ ಕೈಗೊಂಡ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ  ಎಂ.ಎಂ. ಹಾಲ್ಯಾಳ,  ಆರೋಗ್ಯ ಸಹಾಯಕಿ  ಎ.ಕೆ.ಯರಂತಲಿ ಮಠ, ಎಸ್.ಐ. ಕಮಲಪ್ಪನವರ  ಆರೋಗ್ಯ ಮಾಹಿತಿ ನೀಡಿದರು.ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರ ಏಳು ತಂಡಗಳನ್ನು ರಚಿಸಿ ಗ್ರಾಮದ ಬಹುತೇಕ ಭಾಗಗಳಲ್ಲಿ ಸುಮಾರು 405 ಮನೆಗಳ ಲಾರ್ವಾ ಸಮೀಕ್ಷೆ ಕೈಗೊಂಡು ಜನರಲ್ಲಿ ಡಂಗೆ ಜ್ವರದ ಬಗ್ಗೆ ತಿಳಿವಳಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry