ಶನಿವಾರ, ಮೇ 8, 2021
19 °C
ಡೆಂಗೆ ಸಾವಿಗೆ ಅಧಿಕಾರಿಗಳೇ ಹೊಣೆ: ಜಿ.ಪಂ.ಸದಸ್ಯರ ಆರೋಪ

`ಡೆಂಗೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ವಿಫಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡೆಂಗೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲ ವಾಗಿದ್ದು, ಡೆಂಗೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಸಾವು, ನೋವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕೂಡಲೇ ಡೆಂಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರ ಜತೆಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂಬ ಒಕ್ಕೊ ರಲಿನ ಒತ್ತಾಯ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಕೇಳಿಬಂದಿತು.ಶುಕ್ರವಾರ ಜಿ.ಪಂ.ಸಭಾಭವನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯಲ್ಲಿ ಹರಡಿರುವ ಡೆಂಗೆ ಜ್ವರ ಹಾಗೂ ಅದರಿಂದ ಆಗಿರುವ ಅನಾಹುತಗಳ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಮಾತ್ರ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಜಿಲ್ಲೆಯಲ್ಲಿ ಡೆಂಗೆ ಜ್ವರ ಉಲ್ಬಣ ಗೊಂಡಿದೆ ಎಂದು ಸದಸ್ಯರು ಆರೋಪಿಸಿದರು.ನಾಲ್ಕು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಡೆಂಗೆ ಜ್ವರದ ಬಗ್ಗೆ ನಾವು ಜಿ.ಪಂ.ಗಮನಕ್ಕೆ ತಂದಿದ್ದೇವು. ಆದರೆ, ಅಧಿಕಾರಿಗಳನ್ನು ನಮ್ಮ ಮಾತು ಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಅಮಾಯಕ ಮಕ್ಕಳು ಅಕಾಲಿಕ ಸಾವಿಗೆ ತುತ್ತಾಗುತ್ತಿರಲಿಲ್ಲ ಎಂದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಘವೇಂದ್ರಸ್ವಾಮಿ, ಡೆಂಗೆ ಕುರಿತು ಮಾಹಿತಿ ನೀಡುತ್ತಾ ಜಿಲ್ಲೆಯಲ್ಲಿ ಡೆಂಗೆ ಹರಡುವ ಸೊಳ್ಳೆಗಳ ನಾಶಕ್ಕಾಗಿ ಫಾಂಗಿಂಗ್ ಮಾಡಿಸಲಾಗಿದೆ. ಸೊಳ್ಳೆ ಗಳು ಮರು ಉತ್ಪತ್ತಿಯಾಗದಂತೆ ಓವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಛಗೊಳಿಸ ಲಾಗಿದೆ. ರೋಗ ಹರಡುವ ಬಗೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.ಆರೋಗ್ಯಾಧಿಕಾರಿಗಳ ಉತ್ತರಕ್ಕೆ ಸದಸ್ಯರಾದ ಬಸನಗೌಡ ಇನಾಮತಿ, ಶಿವಕುಮಾರ ಮುದ್ದಪ್ಪಳವರ, ರಾಜೇಂದ್ರ ಹಾವೇರಣ್ಣನವರ, ಮಂಜು ನಾಥ ಓಲೇಕಾರ, ಬಸವರಾಜ ಬೇವಿನ ಹಳ್ಳಿ, ಸಂತೋಷಕುಮಾರ ಪಾಟೀಲ, ಶೋಭಾ ನಿಸ್ಸೀಮಗೌಡರ, ಅಬಿದಾಬಿ ನದಾಫ್ ಮುಂತಾದವರು ಸಿಡಿಮಿಡಿ ಗೊಂಡರಲ್ಲದೇ, ಡೆಂಗೆ ಹಾವಳಿ ನಿಯಂತ್ರ ಣಕ್ಕೆ ಇಷ್ಟೊಂದು ಮುಂಜಾಗೃತ ಕ್ರಮ ಕೈಗೊಂಡಿದ್ದರೇ ಜಿಲ್ಲೆಯಲ್ಲಿ ಒಂಬತ್ತು ಮಕ್ಕಳು ಏಕೆ ಈ ಜ್ವರಕ್ಕೆ ಬಲಿಯಾಗುತ್ತಿದ್ದರು ಹಾಗೂ 350ಕ್ಕೂ ಹೆಚ್ಚು ಜನ ಈ ಜ್ವರದಿಂದ ಬಳಲುತ್ತಿದ್ದರು ಎಂದು ಪ್ರಶ್ನಿಸಿದರು.ಅದು ಅಲ್ಲದೇ ಯಾವುದೇ ಗ್ರಾಮದಲ್ಲಿ ಫಾಗಿಂಗ್ ಮಾಡುವುದು ಕೂಡಾ ವ್ಯವಸ್ಥಿತವಾಗಿ ನಡೆದಿಲ್ಲ. ಕಾಟಾಚಾರಕ್ಕೆ ಎಂಬಂತೆ ಒಂದೋ ಎರಡು ಬಾರಿ ಮಾತ್ರ ಮಾಡಿದ್ದಾರೆ. ಒಮ್ಮೆ ಮಾಡಿದರೆ ಸೊಳ್ಳೆಗಳು ನಿಯಂತ್ರ ಣಕ್ಕೆ ಬರುತ್ತಿವೆಯೇ ಎಂದು ಪ್ರಶ್ನಿಸಿದ ಸದಸ್ಯರು, ವೈಜ್ಞಾನಿಕವಾಗಿ ಈ ಸೊಳ್ಳೆಗಳ ನಿಯಂತ್ರಣಕ್ಕೆ ಎಷ್ಟು ಬಾರಿ ಫಾಗಿಂಗ್ ಮಾಡಬೇಕು ಎಂಬುದನ್ನು ಅಧಿಕಾರಿಗಳು ಸಭೆಗೆ ತಿಳಿಸಲು ಎಂದು ಆಗ್ರಹಿಸಿದರು.ಇನ್ನೂ ಹದಿನೈದು ದಿನಕ್ಕೊಮ್ಮೆ ನೀರಿನ ಓವರ್‌ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ ಎಂದು ಅಧಿಕಾರಿ ಗಳು ಸಭೆಗೆ ಮಾಹಿತಿ ನೀಡಿದ್ದಾರೆ. ಅದು ಕೂಡಾ ಶುದ್ಧ ಸುಳ್ಳು. ಫಾಗಿಂಗ್ ಮಾಡುವುದು ಹಾಗೂ ಓವರ್‌ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಿದ್ದ ಪ್ರಮಾಣ ಪತ್ರವನ್ನು ಸಭೆ ಮುಂದೆ ಹಾಜರು ಪಡಿಸಬೇಕೆಂದು ಸದಸ್ಯ ಇನಾಮತಿ ಹಾಗೂ ಓಲೇಕಾರ ಒತ್ತಾಯಿಸಿದರು.ಆಗ ಜಿ.ಪಂ. ಸಿಇಒ ಅಧಿಕಾರಿ ಉಮೇಶ ಕುಸು ಗಲ್ ಅವರು ಎರಡು ದಿನಗಳಲ್ಲಿ ಟ್ಯಾಂಕ್ ಸ್ವಚ್ಛಗೊಳಿಸಿರುವ ಬಗ್ಗೆ ಪ್ರಮಾಣ ಪತ್ರ ನೀಡಬೇಕೆಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶ್ರೀಕಾಂತ ಮೈಸೂರ ಅವರಿಗೆ ಸೂಚಿಸಿದರು.ಸತ್ತವರು ಮರಳಿ ಬರುತ್ತಾರೆಯೇ: ಅಧಿಕಾರಿಗಳು ವಹಿಸಿರುವ ನಿರ್ಲಕ್ಷ್ಯ ದಿಂದ ಅಮಾಯಕ ಮಕ್ಕಳು ಸಾವನ್ನ ಪ್ಪಿವೆ. ಸರ್ಕಾರ ಮೃತ ಮಕ್ಕಳ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿದೆ.ಆದರೆ, ಪರಿಹಾರ ವೇನೂ ಆ ಕುಟುಂಬಕ್ಕೆ ಸಿಗಬಹುದು ಆದರೆ, ಸತ್ತ ಮಕ್ಕಳ ಮರಳಿ ಬರುತ್ತಾ ರೆಯೇ? ಆ ಕುಟುಂಬಗಳಿಗೆ ನ್ಯಾಯ ಒದಗಿಸಲು ಸಾಧ್ಯವೇ ? ಎಂಬುದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡ ಬೇಕೆಂದು ಅಧಿಕಾರಿಗಳು ಕೆಲಸ ಮಾಡ ಬೇಕೆಂದು ಸದಸ್ಯರಾದ ಮಂಜುನಾಥ ಓಲೇಕಾರ, ಶಿವಕುಮಾರ ಮುದ್ದಪ್ಪ ಗೋಳ ಸಲಹೆ ಮಾಡಿದರು.ಪರಿಹಾರ ನೀಡಿ: ಡೆಂಗೆಯಿಂದ ಮೃತ ಪಟ್ಟ ಮಕ್ಕಳ ಕುಟುಂಬಗಳಿಗೆ ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸದಸ್ಯ ಬಸವರಾಜ ಬೇವಿನಹಳ್ಳಿ ಒತ್ತಾಯಿಸಿದರು. ಆಗ ಶಾಸಕ ಯು.ಬಿ.ಬಣಕಾರ ಅವರು, ಜೂ.12ರೊಳಗೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ ಎಂದು ತಿಳಿಸಿದರು.ಪೊಲೀಯೋ ಮಾದರಿಯಲ್ಲಿ ಜಾಗೃತಿ:

ಈಗ ಜಿಲ್ಲೆಯಲ್ಲಿ ಹರಡಿರುವ ಡೆಂಗೆ ನಿಯಂತ್ರಣಕ್ಕೆ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮಗಳನ್ನು ಜನತೆಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ಕೊರಗೂ ನಮ್ಮಲ್ಲಿದೆ. ಜೂ.15 ರಂದು ಜಿಲ್ಲೆಯ ಗ್ರಾಮದಿಂದ ಹಿಡಿದ ಜಿಲ್ಲಾ ಕೇಂದ್ರದವರೆಗೆ ಪಲ್ಸ್ ಪೊಲೀಯೋ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ರಾಘವೇಂದ್ರಸ್ವಾಮಿ ತಿಳಿಸಿದರು.ಅಧಿಕಾರಿಗಳ ಮೇಲೆ ಶಿಸ್ತು ಕ್ರಮ: ಸಿಇಒ ಭರವಸೆ

ಹಾವೇರಿ: ಡೆಂಗೆ ಜ್ವರ ನಿಯಂತ್ರಣಕ್ಕೆ ಈಗಾಗಲೇ ಹಲವು ಕಾರ್ಯ ಕ್ರಮಗಳನ್ನು ಹಾಕಿಕೊಂಡರೂ ನಿಯಂತ್ರಣಕ್ಕೆ ಬಾರದಿರಲು ಕಾರಣ ಗಳೇನು ಎಂಬುದನ್ನು ಪತ್ತೆ ಮಾಡ ಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯರು ಸೇರಿದಂತೆ ಶಾಸಕ ಯು.ಬಿ. ಬಣಕಾರ ಒತ್ತಾಯಿಸಿ ದರು.ಇದಕ್ಕೆ ಉತ್ತರ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು, ಮುಂಬರುವ ದಿನಗಳಲ್ಲಿ ಡೆಂಗೆ ಜ್ವರ ನಿಯಂತ್ರಣಕ್ಕೆ ಬಾರದಿದ್ದರೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.