ಡೆಂಗೆ: ಬಾಲಕಿ ಬಲಿ

7

ಡೆಂಗೆ: ಬಾಲಕಿ ಬಲಿ

Published:
Updated:

ಕವಿತಾಳ (ರಾಯಚೂರು): ಮಾನ್ವಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ ಡೆಂಗೆ ಜ್ವರದಿಂದ ಬಳಲುತ್ತಿದ್ದ ಬಾಲಕಿ ಭಾನುವಾರ ಮೃತಪಟ್ಟಳು.ತೀವ್ರ ಜ್ವರ ಮತ್ತು ವಾಂತಿಯಿಂದ ಅಸ್ವಸ್ಥಗೊಂಡಿದ್ದ ಆದಮ್ಮ ಯಂಕಪ್ಪ (8)  ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ಡೆಂಗೆ ಜ್ವರ ಎಂದು ಶಂಕಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದರು. ಬಳ್ಳಾರಿ ವಿಮ್ಸನಲ್ಲಿ ಡೆಂಗೆ ಎಂದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸತ್ತಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry