ಡೆಂಗೆ: ಬಾಲಕಿ ಸಾವು

ಶುಕ್ರವಾರ, ಮೇ 24, 2019
29 °C

ಡೆಂಗೆ: ಬಾಲಕಿ ಸಾವು

Published:
Updated:

ಬಾದಾಮಿ: ಡೆಂಗೆ ಜ್ವರದಿಂದ ಬಳಲುತ್ತಿದ್ದಳು ಎನ್ನಲಾದ ಐದು ವರ್ಷದ ಬಾಲಕಿಯೊಬ್ಬಳು ಭಾನುವಾರ ಮೃತಪಟ್ಟಿದ್ದಾಳೆ. ಬಾಲಕಿ ಸುಷ್ಮಿತಾ ಗಾಣಗೇರ ಅವಳನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ಎಂಟು ದಿನಗಳ ಹಿಂದೆ  ದಾಖಲಿಸಲಾಗಿತ್ತು.ಕೆಲವು ದಿನಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಡೆಂಗೆ ಶಂಕಿತ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ಈ ಆಸ್ಪತ್ರೆಗಳ ವೈದ್ಯರು ಹೇಳುತ್ತಾರೆ. ಆದರೆ ಅಧಿಕೃತ ಮೂಲಗಳು ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿವೆ. ಪಟ್ಟಣದಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದು ಈಗಾಗಲೇ ನಾಲ್ವರು ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry