ಡೆಂಗೆ: 4ನೇ ಸ್ಥಾನದಲ್ಲಿ ಕರ್ನಾಟಕ

7

ಡೆಂಗೆ: 4ನೇ ಸ್ಥಾನದಲ್ಲಿ ಕರ್ನಾಟಕ

Published:
Updated:
ಡೆಂಗೆ: 4ನೇ ಸ್ಥಾನದಲ್ಲಿ ಕರ್ನಾಟಕ

ಬೆಂಗಳೂರು: ಡೆಂಗೆಬಾಧಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಶ ಇದೀಗ ಹೊರಬಿದ್ದಿದೆ.  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗೆ ಜ್ವರ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು 2,430 ಡೆಂಗೆ ಪ್ರಕರಣಗಳು ದೃಢಪಟ್ಟಿವೆ. ಡೆಂಗೆ ಜ್ವರದಿಂದ 21 ಜನ ಸತ್ತಿದ್ದಾರೆ.ಈ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ಎಂಟು ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿಯೇ ಶೇ 28ರಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.ಡೆಂಗೆ ಜ್ವರ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ನಡೆದ ಸಭೆಯಲ್ಲಿ ಈ ಮಾಹಿತಿ ಬಿಚ್ಚಿಟ್ಟ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, `ರೋಗ ತಡೆಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯು ಈ ತಿಂಗಳ 2ನೇ ವಾರದಿಂದ ರಾಜ್ಯದಾದ್ಯಂತ ವಿಶೇಷ ಆಂದೋಲನ ಆರಂಭಿಸಲು ನಿರ್ಧರಿಸಿದೆ~ ಎಂದು ತಿಳಿಸಿದರು.`ಸೊಳ್ಳೆ ಹಾವಳಿ ಹೆಚ್ಚಿರುವ ಕಡೆ ಖಾಸಗಿ ವೈದ್ಯರ ಸಹಕಾರದೊಂದಿಗೆ ಪಂಚಾಯ್ತಿ ಮಟ್ಟದಲ್ಲಿ ರಕ್ತ ತಪಾಸಣಾ ಶಿಬಿರಗಳನ್ನು ನಡೆಸಲು ಆದ್ಯತೆ ನೀಡಬೇಕು. ಈಗಾಗಲೇ ಸಾವಿನ ಪ್ರಮಾಣ ಏರಿಕೆಯಾಗಿರುವುದರಿಂದ ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು~ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, `ಜಿಲ್ಲಾ ಆರೋಗ್ಯ ಸಿಬ್ಬಂದಿಗಳು ಮನೆ- ಮನೆಗೆ ತೆರಳಿ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಲಾರ್ವಾ ನಾಶಕಗಳನ್ನು ಸಿಂಪಡಿಸುವ ಅಗತ್ಯ ಮನವರಿಕೆ ಮಾಡಿಕೊಡಬೇಕು~ ಎಂದು ಸಲಹೆ ನೀಡಿದರು.

ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್, ಹೆಚ್ಚುವರಿ ಆಯುಕ್ತರಾದ (ಆರೋಗ್ಯ) ಸಲ್ಮಾ ಕೆ.ಫಾಹಿಂ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry