ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವತಿಯ ವಾರಾಂತ್ಯ ಅಥ್ಲೆಟಿಕ್ಸ್

7
ಪ್ರವೀಣ್, ನಿಖಿಲ್ ಚಿನ್ನದ ಸಾಧನೆ

ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವತಿಯ ವಾರಾಂತ್ಯ ಅಥ್ಲೆಟಿಕ್ಸ್

Published:
Updated:
ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವತಿಯ ವಾರಾಂತ್ಯ ಅಥ್ಲೆಟಿಕ್ಸ್

ಬೆಂಗಳೂರು: ಮ್ಯಾಕ್ಸ್‌ಮುಲ್ಲರ್ ಪಬ್ಲಿಕ್ ಸ್ಕೂಲ್‌ನ ಎಸ್.ಪ್ರವೀಣ್ ಕುಮಾರ್ ಮತ್ತು ದೇವಮಾತಾ ಸೆಂಟ್ರಲ್ ಸ್ಕೂಲ್‌ನ ನಿಖಿಲ್ ರೋಹನ್ ಅವರು ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪು ಪ್ರಾಯೋಜಿತ 24ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್ ಕೂಟದ ಮೂರನೇ ವಾರದ ಸ್ಪರ್ಧಾಕೂಟದ ಹದಿನಾರು ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದಲ್ಲಿ  ತಲಾ ಎರಡು ಚಿನ್ನದ ಪದಕ ಗೆದ್ದು ಗಮನಾರ್ಹ ಸಾಮರ್ಥ್ಯ ತೋರಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಸ್ಪರ್ಧಾಕೂಟದಲ್ಲಿ ಪ್ರವೀಣ್ ಕುಮಾರ್ 800 ಮೀಟರ್ಸ್ ಓಟವನ್ನು 10ನಿಮಿಷ 22.3 ಸೆಕೆಂಡುಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಗಳಿಸಿದರೆ, 3,000ಮೀಟರ್ಸ್ ಓಟದ ಸ್ಪರ್ಧೆಯಲ್ಲಿಯೂ ಮೊದಲಿಗರಾಗಿ ಗುರಿ ಮುಟ್ಟಿದರು. ದೇವಮಾತಾ ಸೆಂಟ್ರಲ್ ಸ್ಕೂಲ್‌ನ ನಿಖಿಲ್ ರೋಹನ್ 100ಮೀಟರ್ಸ್ ಓಟ ಮತ್ತು 110ಮೀಟರ್ಸ್ ಹರ್ಡಲ್ಸ್‌ಗಳೆರಡರಲ್ಲಿಯೂ ಮೊದಲ ಸ್ಥಾನ ಪಡೆದರು. ಹದಿಮೂರು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್‌ನ ನಿಂಗರಾಜು 100ಮೀಟರ್ಸ್ ಓಟ ಮತ್ತು 800ಮೀಟರ್ಸ್ ಓಟಗಳೆರಡರಲ್ಲಿಯೂ ಮೊದಲಿಗರಾಗಿ ಗುರಿ ಮುಟ್ಟಿದರು.ಬಾಲಕರ ವಿಭಾಗದ ಫಲಿತಾಂಶಗಳು ಇಂತಿವೆ.

13ವರ್ಷದೊಳಗಿನವರು:

100ಮೀ.ಓಟ: ನಿಂಗರಾಜು (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್) (ಕಾಲ: 12.3ಸೆ.)-1, ಅನೀಶ್ ಯಾದವ್ (ಆರ್ಮಿ ಪಬ್ಲಿಕ್ ಸ್ಕೂಲ್)-2, ಸಿ.ಜಿ.ಯೋಗೇಶ್-3 (ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲು), 800ಮೀ. ಓಟ: ನಿಂಗರಾಜು (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್) (ಕಾಲ: 2ನಿ.27.9ಸೆ.)-1, ಡಿ.ಸಾಗರ್ (ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲು)-2, ದಿಲೀಪ್-3 (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್), 3,000ಮೀ. ಓಟ: ಎಲ್.ಎಸ್.ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್) (ಕಾಲ: 11ನಿ.08.9ಸೆ.)-1, ಅಕ್ಷಯ್ -2, ರಾಜಶೇಖರ್ -3 (ಇಬ್ಬರೂ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್), 80ಮೀ.ಹರ್ಡಲ್ಸ್: ಸಿ.ಜಿ.ಯೋಗೇಶ್ (ವಿಎಲ್‌ಎಸ್ ವಿದ್ಯಾಸಾಗರ ಕನ್ನಡ ಹೈಸ್ಕೂಲು) (ಕಾಲ: 15.5ಸೆ.)-1, ಆರ್.ಚಂದನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಎಸ್.ಶ್ರೀನಿವಾಸ್ -3 (ಶೇಷಾದ್ರಿಪುರಂ ಹಿರಿಯ ಪ್ರಾಥಮಿಕ ಶಾಲೆ), ಲಾಂಗ್‌ಜಂಪ್: ಸಂಜೀತ್ ಕುಮಾರ್ (ಸಿಲಿಕಾನ್‌ಸಿಟಿ ಎ.ಎಸ್.ಎಜುಕೇಷನ್) (ದೂರ: 5.34ಮೀ.)-1, ಅನೀಶ್ ಯಾದವ್-2, ಸಾಗರ್ ಅಭಿಷೇಕ್-3 (ಇಬ್ಬರೂ ಆರ್ಮಿ ಪಬ್ಲಿಕ್ ಸ್ಕೂಲ್), ಟ್ರಿಪಲ್ ಜಂಪ್: ಸುಜಯ್ ಸುಬ್ರಹ್ಮಣ್ಯಂ (ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಮ್) (ದೂರ: 9.04ಮೀ.)-1, ಯಾಜಿತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-2, ಕುಶಾಲ್ ರಾಜಾ (ಡೆಕ್ಕನ್ ಇಂಟರ್‌ನ್ಯಾಶನಲ್ ಸ್ಕೂಲ್)-3, ಹೈಜಂಪ್: ರಾಹುಲ್ ರಘು (ವಿದ್ಯಾನಿಕೇತನ ಸ್ಕೂಲ್)(ಎತ್ತರ: 1.30ಮೀ.)-1, ಆರ್.ಚಂದನ್ -2, ಅಭಿನವ್ ಜಿ-3 (ಇಬ್ಬರೂ ದೇವಮಾತಾ ಸೆಂಟ್ರಲ್ ಸ್ಕೂಲ್), ಶಾಟ್‌ಪಟ್: ಡಿ.ಸಾಗರ್ (ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲು) (ದೂರ: 11.07ಮೀ.)-1, ವರುಣ್ ಅಡ್ತಿ ಡಿ.ಎಸ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ರೋಹಿತ್ ಜಹಗೀರದಾರ್ (ವಿದ್ಯಾ ನಿಕೇತನ್ ಸ್ಕೂಲ್)-3.16ವರ್ಷದೊಳಗಿನವರು:

100ಮೀ. ಓಟ: ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್) (ಕಾಲ: 11.9ಸೆ.)-1, ಸಾಹಿಲ್ ಶಂಕರ್ (ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್)-2, ಎಂ.ಪ್ರವೀಣ್ ಕುಮಾರ್ -3 (ಇಂದಿರಾನಗರ ಹೈಸ್ಕೂಲು), 800ಮೀ. ಓಟ: 800ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಮ್ಯಾಕ್ ಮುಲ್ಲರ್ ಪಬ್ಲಿಕ್ ಸ್ಕೂಲ್) (ಕಾಲ: 2ನಿ.11.4ಸೆ.)-1, ಎನ್.ರಕ್ಷಿತ್ ಗೌಡ (ಫ್ಲಾರೆನ್ಸ್ ಹೈಸ್ಕೂಲು)-2, ಸುರೇಶ್ ಒರಾನ್-3 (ಕೇಂದ್ರೀಯ ವಿದ್ಯಾಲಯ), 3,000ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಮ್ಯಾಕ್ಸ್‌ಮುಲ್ಲರ್ ಪಬ್ಲಿಕ್ ಸ್ಕೂಲ್) (ಕಾಲ: 10ನಿ.22.3ಸೆ.)-1, ಎಸ್.ಶರತ್ -2, ಸಿ.ಸ್ಟಾಲಿನ್ ಅಭಿಲಾಷ್ -3 (ಇಬ್ಬರೂ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್), 110ಮೀ. ಹರ್ಡಲ್ಸ್: ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್) (ಕಾಲ: 20.1ಸೆ.)-1,ಎನ್.ಡಿ.ಕೃಷ್ಣ ಪ್ರಸಾದ್ (ಇಂದಿರಾನಗರ ಹೈಸ್ಕೂಲ್)-2, ಜಿ.ರೋಹನ್ (ದಿಲ್ಲಿ ಪಬ್ಲಿಕ್ ಸ್ಕೂಲ್)-3, ಲಾಂಗ್‌ಜಂಪ್: ಎಸ್.ಜೀವನ್ (ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡೆರಿ ಎಜುಕೇಷನ್) (ದೂರ: 5.74ಮೀ.)-1, ಬಿ.ಜಿ.ಆಕಾಶ್-2, ಸಾಹಿಲ್ ಶಂಕರ್ -3 (ಇಬ್ಬರೂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್), ಟ್ರಿಪಲ್ ಜಂಪ್: ಬಿ.ಸಚಿನ್ ಗೌಡ (ಅಕಾಯ್ ಪಬ್ಲಿಕ್ ಸ್ಕೂಲ್) (ದೂರ: 10.65ಮೀ.)-1, ಅಭಿರಾಮ್ ನಟರಾಜನ್ (ರ‌್ಯಾನ್ ಇಂಟರ್‌ನ್ಯಾಶನಲ್ ಸ್ಕೂಲ್)-2, ಕಿರಣ್ ಗೌಡ (ದೇವಮಾತಾ ಸೆಂಟ್ರಲ್ ಸ್ಕೂಲ್)-3, ಹೈಜಂಪ್: ಅಭಿರಾಮ್ ನಟರಾಜನ್ (ರ‌್ಯಾನ್‌ಇಂಟರ್‌ನ್ಯಾಶನಲ್ ಸ್ಕೂಲ್) (ಎತ್ತರ: 1.60ಮೀ.)-1, ಪ್ರೇರಣಾ ಮಂಜುನಾಥ (ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್)-2, ಟಿ.ಟಿ.ಜೈ ಪ್ರಕಾಶ್ (ಅಕಾಯ್ ಪಬ್ಲಿಕ್ ಸ್ಕೂಲ್)-3. ಶಾಟ್‌ಪಟ್: ಬಿ.ವಿ.ರಾಹುಲ್ (ಇಂದಿರಾನಗರ ಹೈಸ್ಕೂಲು) (ದೂರ: 10.19ಮೀ.)-1, ವೇದ್ ಬದ್ರಿ (ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್)-2, ವಿ.ಸ್ನೇಹಿತ್ ಗೌಡ (ಇಂದಿರಾ ನಗರ ಹೈಸ್ಕೂಲು)-3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry