ಮಂಗಳವಾರ, ಏಪ್ರಿಲ್ 13, 2021
23 °C

ಡೆಬಿಟ್ ಕಾರ್ಡ್ ಬಳಕೆಗೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ `ಡೆಬಿಟ್ ಕಾರ್ಡ್~ ಬಳಕೆ ಕಡಿಮೆ. ಆದರೆ ಹೊಸ `ಎಟಿಎಂ~ ಘಟಕಗಳ ಸ್ಥಾಪನೆ ಮಾತ್ರ ವಾರ್ಷಿಕ ಶೇ 25ರಷ್ಟು ಹೆಚ್ಚುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.`ಡೆಬಿಟ್~ ಕಾರ್ಡ್ ಬಳಕೆ ಹೆಚ್ಚಿಸಲು ಗ್ರಾಮೀಣ ಪ್ರದೇಶಗಳಲ್ಲಿ `ವೈಟ್ ಲೇಬಲ್ ಎಟಿಎಂ ಘಟಕ~ ಸ್ಥಾಪಿಸಲು `ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಮೂರು ಮತ್ತು ನಾಲ್ಕನೇ ಹಂತದ ನಗರಗಳಲ್ಲಿ ಬ್ಯಾಂಕ್‌ಗಳು `ಎಟಿಎಂ~ ಘಟಕ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು `ಆರ್‌ಬಿಐ~ ಗವರ್ನರ್ ಡಿ.ಸುಬ್ಬರಾವ್ ಇಲ್ಲಿ ನಡೆದ `ಐಡಿಆರ್‌ಬಿಟಿ~ ಬ್ಯಾಂಕಿಂಗ್ ತಂತ್ರಜ್ಞಾನ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದರು.ಸದ್ಯ ದೇಶದಲ್ಲಿ ವಾಣಿಜ್ಯ ಮಳಿಗೆಗಳಲ್ಲಿ  `ಮರ್ಚೆಂಟ್ ಡಿಸ್ಕೌಂಟ್ ರೇಟ್~(ಎಂಡಿಆರ್) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಸಮಾನವಾಗಿಯೇ ಇದೆ. ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್ ಬಳಕೆಗೆ ಹೊಸ ದರ ಜಾರಿಗೆ ತರಲಾಗುವುದು. ಇದರ ಪ್ರಕಾರ ರೂ. 2000ದವರೆಗಿನ ಖರೀದಿಗೆ ಡೆಬಿಟ್ ಕಾರ್ಡ್‌ನ ಎಂಡಿಆರ್ ಶೇ 0.75ಕ್ಕಿಂತ ಜಾಸ್ತಿ ಇರುವಂತಿಲ್ಲ. ರೂ. 2000ಕ್ಕಿಂತ ಮೇಲ್ಪಟ್ಟ ಖರೀದಿಗೆ ಎಂಡಿಆರ್ ಶೇ 1ಕ್ಕಿಂತ ಹೆಚ್ಚಿರುವಂತಿಲ್ಲ ಎಂದು ವಿವರಿಸಿದರು. ಸದ್ಯ ದೇಶದಲ್ಲಿ 50 ಬ್ಯಾಂಕುಗಳು ಮೊಬೈಲ್ ಫೋನ್ ಮೂಲಕ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಿವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.