ಭಾನುವಾರ, ಅಕ್ಟೋಬರ್ 20, 2019
22 °C

ಡೆಲ್ಗೆ ದಂಡ

Published:
Updated:

ಬೆಂಗಳೂರು: ದೋಷಪೂರಿತ `ಲ್ಯಾಪ್‌ಟಾಪ್~ ನೀಡಿದ್ದೂ ಅಲ್ಲದೆ, ಅದನ್ನು ರಿಪೇರಿ ಮಾಡದೆ ಗ್ರಾಹಕರೊಬ್ಬರಿಗೆ `ಡೆಲ್~ ಕಂಪೆನಿ ಸಿಬ್ಬಂದಿ ತೊಂದರೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಅಭಿಪ್ರಾಯ ಪಟ್ಟಿದೆ.ಈ ಹಿನ್ನೆಲೆಯಲ್ಲಿ, ಅರ್ಜಿದಾರರಾಗಿರುವ ಎಚ್‌ಎಸ್‌ಆರ್ ಲೇಔಟ್ ನಿವಾಸಿ ಪಿ. ಪಿಯುಷ್ ಅವರಿಗೆ ಹೊಸ ಲ್ಯಾಪ್‌ಟಾಪ್ ನೀಡುವಂತೆ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ. ಇದರ ಜೊತೆಗೆ ನ್ಯಾಯಾಲಯ ವೆಚ್ಚದ ರೂಪದಲ್ಲಿ ರೂ 5 ಸಾವಿರ ನೀಡಬೇಕು ಎಂದೂ ಆದೇಶಿಸಲಾಗಿದೆ.

Post Comments (+)