ಡೆಲ್ಲಿ ಡೇರ್‌ಡೆವಿಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ

7

ಡೆಲ್ಲಿ ಡೇರ್‌ಡೆವಿಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ

Published:
Updated:

ಡರ್ಬನ್ (ಪಿಟಿಐ): ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಈಗ ಮಳೆಯದ್ದೇ ಆಟ. ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಆಕ್ಲೆಂಡ್ ಏಸಸ್ ನಡುವಿನ ಪಂದ್ಯವೂ ಮಳೆಯ ಕಾರಣ ರದ್ದಾಯಿತು. 

ಶುಕ್ರವಾರ ರಾತ್ರಿ ನಡೆಯಬೇಕಿದ್ದ `ಎ~ ಗುಂಪಿನ ಈ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್ ನೀಡಲಾಯಿತು. ಮಾಹೇಲ ಜಯವರ್ಧನೆ ಸಾರಥ್ಯದ ಡೇರ್‌ಡೆವಿಲ್ಸ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಈ ತಂಡದ ಬಳಿ ಈಗ ಒಟ್ಟು ಆರು ಪಾಯಿಂಟ್‌ಗಳಿವೆ. ಡೇರ್‌ಡೆವಿಲ್ಸ್ ಭಾನುವಾರ ಪರ್ತ್ ಸ್ಕಾರ್ಚರ್ಸ್‌ ಎದುರು ಆಡಲಿದೆ.  ಮುಂಬೈ ಇಂಡಿಯನ್ಸ್ ತಂಡದ ಎರಡನೇ ಪಂದ್ಯಕ್ಕೆ ಗುರುವಾರ ಮಳೆ ಅಡ್ಡಿಯಾಗಿತ್ತು. ಈ ತಂಡವೀಗ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಈಗಾಗಲೇ ಕೋಲ್ಕತ್ತ ನೈಟ್ ರೈಡರ್ಸ್ ಹೊರಬಿದ್ದಿದೆ. ಎರಡು ಪಂದ್ಯದಲ್ಲಿ ಸೋಲು ಕಂಡಿದ್ದ ಈ ತಂಡದ ಮತ್ತೊಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry