ಡೇಂಜರಸ್ ಸೆಲೆಬ್ರಿಟಿ!

7
ಪ್ರಿಯಾಂಕಾ

ಡೇಂಜರಸ್ ಸೆಲೆಬ್ರಿಟಿ!

Published:
Updated:
ಡೇಂಜರಸ್ ಸೆಲೆಬ್ರಿಟಿ!

‘ಸೈಬರ್ ಜಗತ್ತಿನ ಮೋಸ್ಟ್‌ ಡೇಂಜರಸ್‌ ಸೆಲೆಬ್ರಿಟಿ’ಗಳ ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಂತರದ ಸ್ಥಾನಗಳು ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರಿಗೆ ಸಂದಿವೆ.ಮೆಕೆಫೆ ಕಂಪೆನಿಯ ಭಾರತ ಗ್ರಾಹಕರ ವಿಭಾಗದ ಉಪಾಧ್ಯಕ್ಷ ವೆಂಕಟಸುಬ್ರಹ್ಮಣ್ಯಂ ಕೃಷ್ಣಪುರ್‌ ಈ ಪಟ್ಟಿಯ ವಿವರ ಬಿಚ್ಚಿಟ್ಟರು. ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳು, ವೆಬ್‌ಪುಟಗಳನ್ನು ಅಭಿಮಾನಿಗಳು ಕುತೂಹಲದಿಂದ ನೋಡುತ್ತಾರಷ್ಟೆ. ಕೆಲವರ ಕುಚೋದ್ಯಕ್ಕೂ ಅವು ಬಳಕೆಯಾಗುತ್ತವೆ.

ಸೆಲೆಬ್ರಿಟಿಗಳ ಸೈಬರ್‌ ಜಗತ್ತಿನ ಖಾತೆಗಳನ್ನು ಹೀಗೆ ಬಳಸಿಕೊಂಡು ಅಭಿಮಾನಿಗಳನ್ನು ದಿಕ್ಕು ತಪ್ಪಿಸುವ ಅನೇಕರಿದ್ದಾರೆ. ಅಂಥ ದುಷ್ಕೃತ್ಯಕ್ಕೆ ವಸ್ತುವಾದಂಥ ಸೆಲೆಬ್ರಿಟಿಗಳ ಪಟ್ಟಿ ಇದು. ಅಂದರೆ, ಪ್ರಿಯಾಂಕಾ ಚೋಪ್ರಾ ಅವರಿಗೆ ಸಂಬಂಧಪಟ್ಟ ವೈಯಕ್ತಿಕ ವಿವರಗಳನ್ನು ವೆಬ್‌ಪುಟಗಳಲ್ಲಿ ಹೆಚ್ಚು ಕುಚೋದ್ಯ ಮಾಡಲು ಬಳಸಲಾಗಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಸನ್ನಿ ಲಿಯೋನ್‌ ಮೊದಲ ಸ್ಥಾನದಲ್ಲಿದ್ದರು. ಈ ವರ್ಷದ ಪಟ್ಟಿಯ ಮೊದಲ ಐದು ಸ್ಥಾನಗಳಲ್ಲಿ ಕರೀನಾ ಕಪೂರ್‌ ಹಾಗೂ ಅಕ್ಷಯ್‌ ಕುಮಾರ್‌ ಹೆಸರುಗಳೂ ಇವೆ.ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಇಂಥ ಕುಚೋದ್ಯಕ್ಕೆ ಒಳಗಾದ ವೆಬ್‌ಪುಟಗಳನ್ನು ‘ಸೋಂಕು ಪೀಡಿತ ವೆಬ್ ಪುಟಗಳು’ ಎಂದು ಮೆಕೆಫೆ ಸಾಫ್ಟ್‌ವೇರ್‌ ಕಂಪೆನಿ ಹೆಸರಿಸಿದೆ. ‘ಕಿಡಿಗೇಡಿಗಳು ಸುಮ್ಮನೆ ತಮಗಿಷ್ಟ ಬಂದಂತೆ ಈ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ವೈಯಕ್ತಿಕ ವಿವರಗಳನ್ನು ತಪ್ಪಾಗಿ ತಿದ್ದುತ್ತಾರೆ.ಇದರಿಂದ ಮಾಹಿತಿ ಬಯಸುವವರ ದಾರಿ ತಪ್ಪಿಸಿದಂತೆ ಆಗುತ್ತದೆ. ಪ್ರಿಯಾಂಕಾ ಚೋಪ್ರಾಗೆ ಸಂಬಂಧಿಸಿದ 79 ವೆಬ್‌ಪುಟಗಳು ಇಂಥ ಸೋಂಕಿಗೆ ಒಳಗಾಗಿವೆ. ಶಾರುಖ್‌ ಖಾನ್‌ ಅವರ ಕುರಿತ ಮಾಹಿತಿ ಇರುವ 75 ವೆಬ್‌ಪುಟಗಳು ಹೀಗಾಗಿವೆ’ ಎಂದು ವೆಂಕಟಸುಬ್ರಹ್ಮಣ್ಯಂ ಕೃಷ್ಣಪುರ್‌ ವಿವರಗಳನ್ನು ಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry