ಡೇಟಿಂಗ್ ಟೇಲರ್

7

ಡೇಟಿಂಗ್ ಟೇಲರ್

Published:
Updated:
ಡೇಟಿಂಗ್ ಟೇಲರ್

ಸಂಗೀತವೇ ನನ್ನುಸಿರು ಎನ್ನುವ ಗಾಯಕಿ ಟೇಲರ್ ಸ್ವಿಫ್ಟ್ ಅವರು ಪ್ರೀತಿಯ ಬಲೆಯಲ್ಲಿ ಬೇಗ ಬೀಳುತ್ತಾರಂತೆ. 22 ವರ್ಷಯ ಮುದ್ದು ಮೊಗದ ಈ ಬೆಡಗಿ ಸದ್ಯಕ್ಕೆ ಕೋನರ್ ಕೆನಡಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾಳೆ.ಪ್ರೀತಿಯಲ್ಲಿ ಹಲವು ಪಲ್ಲಟಗಳನ್ನು ದಾಖಲಿಸಿರುವ ಈಕೆಯ ಜೀವನ ಟೇಲರ್‌ಗೆ ಪ್ರೀತಿಯ ಪಾಠವನ್ನು ಚೆನ್ನಾಗಿಯೇ ಕಲಿಸಿದೆಯಂತೆ.“ನಾನು ಈಗಲೂ ಪ್ರೀತಿಯನ್ನು ಬಹುವಾಗಿ ನಂಬುತ್ತೇನೆ. ಪ್ರೀತಿ ಕಳಚಿದ ನಂತರ ಮನಸ್ಸು ಲಕ್ಷಾಂತರ ಚೂರುಗಳಾಗಿ ಸಿಡಿದು ಹೋಗುತ್ತದೆ. ಹೃದಯ ಸುಟ್ಟು ಬೂದಿಯಾಗುತ್ತದೆ. ಆದರೂ ಪ್ರೇಮಿಗಳು ಸುಟ್ಟ ಬೂದಿಯ ಮೇಲೆ ನಿಂತು ಚಿಂತಿಸಲು ಶುರು ಮಾಡುತ್ತಾರೆ.

 

ಯಾಕೆ ನಾನು ಆ ಹುಡುಗ/ಹುಡುಗಿಯನ್ನು ಭೇಟಿಯಾದೆ. ಯಾಕವರನ್ನು ಮನಸ್ಸಿಗೆ ಹಚ್ಚಿಕೊಂಡೆ. ಅವರೊಂದಿಗೆ ಏನೆಲ್ಲಾ ಸಂಗತಿಗಳು ಜರುಗಿದವು, ಈ ತರಹ ಮನಸ್ಸು ಯೋಚಿಸಲು ಶುರುಮಾಡುತ್ತದೆ. ಕಣ್ಣು ಕಣ್ಣು ಸಂಧಿಸಿದಾಗ ಹುಟ್ಟಿಕೊಂಡ ಪ್ರೀತಿಗೆ ಮೋಸವಾದ ನಂತರವೂ ಮನಸ್ಸಿನಿಂದ ಮಾಸುವುದಿಲ್ಲ. ಅವರನ್ನು ನಾವು ಎಷ್ಟೇ ದ್ವೇಷಿಸಿದರೂ ಮನಸ್ಸಿನ ಒಂದು ಮೂಲೆಯಲ್ಲಿ ಅವರ ಬಗ್ಗೆ ಪ್ರೀತಿ ಇದ್ದೇ ಇರುತ್ತದೆ.ಅವರನ್ನು ಮತ್ತೊಮ್ಮೆ ಪ್ರೀತಿಸಲು ಶುರುಮಾಡುತ್ತೇವೆ. ನಂಬಿಕೆ ಕಳೆದುಕೊಂಡ ವ್ಯಕ್ತಿಯ ಬಗ್ಗೆ ಕೊರಗುವುದು ಬೇಡ. ಮನಸಾರೆ ಪ್ರೀತಿ ನೀಡುವ ಜನರನ್ನು ಕಳೆದುಕೊಳ್ಳುವುದು ಬೇಡ” ಎನ್ನುತ್ತಿದ್ದಾಳೆ ಈ ಚೆಲುವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry