ಡೇರ್‌ಡೆವಿಲ್ಸ್ ಉಪನಾಯಕನಾಗಿ ಮಾಹೇಲ

7

ಡೇರ್‌ಡೆವಿಲ್ಸ್ ಉಪನಾಯಕನಾಗಿ ಮಾಹೇಲ

Published:
Updated:

ನವದೆಹಲಿ (ಪಿಟಿಐ): ಶ್ರೀಲಂಕಾದ ಮಾಹೇಲ ಜಯವರ್ಧನೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ದೆಹಲಿ ಡೇರ್‌ಡೆವಿಲ್ಸ್ ತಂಡದ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.`ಒಬ್ಬ ನಾಯಕನಾಗಿ ಮಾಹೇಲ ಉತ್ತಮ ದಾಖಲೆ ಹೊಂದಿದ್ದಾರೆ. ತಂಡದ ಇತರ ಸದಸ್ಯರಿಗೆ ಅವರ ಮೇಲೆ ಗೌರವ ಇದೆ. ಈ ಕಾರಣ ಉಪನಾಯಕನಾಗಿ ನೇಮಿಸಲಾಗಿದೆ~ ಎಂದು ಡೇರ್‌ಡೆವಿಲ್ಸ್ ತಂಡದ ಅಧಿಕಾರಿ ಟಿ.ಎ. ಶೇಖರ್ ಬುಧವಾರ ನುಡಿದರು.`ತಂಡದ ಸಭೆಯಲ್ಲಿ ಅವರ ಸಾನಿಧ್ಯ ಅಗತ್ಯ. ಮಾಹೇಲ ನೀಡುವ ಸಲಹೆಗಳು ನೆರವಿಗೆ ಬರಲಿದೆ~ ಎಂದು ಹೇಳಿದರು. ಜಯವರ್ಧನೆ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಲಂಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಲಂಕಾದ ಹಿರಿಯ ಬ್ಯಾಟ್ಸ್‌ಮನ್‌ಗೆ ಈ ಜವಾಬ್ದಾರಿ ನೀಡಿರುವುದನ್ನು ತಂಡದ ನಾಯಕ ವೀರೇಂದ್ರ ಸೆಹ್ವಾಗ್ ಸ್ವಾಗತಿಸಿದ್ದಾರೆ. ಜಯವರ್ಧನೆ ಹೊಂದಿರುವ ಅನುಭವ ತಂಡಕ್ಕೆ ನೆರವಾಗಿದೆ ಎಂದು `ವೀರೂ~ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry