ಡೇವಿಸ್‌ ಕಪ್‌: ಆನಂದ್‌ ಅಮೃತ್‌ರಾಜ್‌ ನಾಯಕ

7

ಡೇವಿಸ್‌ ಕಪ್‌: ಆನಂದ್‌ ಅಮೃತ್‌ರಾಜ್‌ ನಾಯಕ

Published:
Updated:

ನವದೆಹಲಿ (ಪಿಟಿಐ): ಮಾಜಿ ಆಟಗಾರ ಆನಂದ್‌ ಅಮೃತ್‌ರಾಜ್‌ ಅವರು ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದ ನೂತನ ನಾಯಕರಾಗಿ (ಆಟವಾಡದ) ನೇಮಕಗೊಂಡಿದ್ದಾರೆ.ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಶನಿವಾರ ಈ ನಿರ್ಧಾರ ಕೈಗೊಂಡಿತು. 61ರ ಹರೆಯದ ಅಮೃತ್‌ರಾಜ್‌ ಅವರು ಎಸ್‌.ಪಿ. ಮಿಶ್ರಾ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.  ಅಮೃತ್‌ರಾಜ್‌ 2014ರ  ಕೊನೆಯವರೆಗೆ ನಾಯಕರಾಗಿ ಮುಂದುವರಿಯುವರು.

  

‘ಸೆ. 21 ರಂದು ಗೋವಾದಲ್ಲಿ ನಡೆದ ಎಐಟಿಎ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳ ಲಾಯಿತು’ ಎಂದುಎಐಟಿಎ ಕಾರ್ಯ ದರ್ಶಿ ಭರತ್‌ ಓಜಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry