ಡೇವಿಸ್ ಕಪ್‌ನಿಂದ ಹಿಂದೆ ಸರಿದ ಪೇಸ್

7

ಡೇವಿಸ್ ಕಪ್‌ನಿಂದ ಹಿಂದೆ ಸರಿದ ಪೇಸ್

Published:
Updated:

ನವದೆಹಲಿ (ಐಎಎನ್‌ಎಸ್): ಹಿರಿಯ ಹಾಗೂ ಅನುಭವಿ ಆಟಗಾರ ಲಿಯಾಂಡರ್‌ ಪೇಸ್ 2016ರಲ್ಲಿ ಬ್ರೆಜಿಲ್‌ನಲ್ಲಿ  ನಡೆಯಲಿರುವ  ರಿಯೊ ಡಿ ಜನೈರೊ ಒಲಿಂಪಿಕ್ಸ್‌ಗಾಗಿ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಡೇವಿಸ್ ಕಪ್‌ ಸೇರಿದಂತೆ ಈ ವರ್ಷದ ಇತರ ಪ್ರಮುಖ ಟೂರ್ನಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಈ ಸಂಬಂಧ ಪೇಸ್ ಅವರ ತಂದೆ ವೆಸ್ ಪೇಸ್ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷ ಅನಿಲ್‌ ಖನ್ನಾ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಎಐಟಿಎ ಇದಕ್ಕೆ ಅನುಮತಿ ನೀಡಿದೆ.

‘ನನ್ನ ಪುತ್ರನಿಗೆ ವಿಶ್ರಾಂತಿಯ ಅಗತ್ಯವಿದ್ದು, ಜನವರಿ 31 ರಿಂದ ಆರಂಭವಾಗಲಿರುವ ಡೇವಿಸ್‌ ಕಪ್‌ ಹಾಗೂ ಈ ವರ್ಷದ ಇತರ ಪ್ರಮುಖ ಟೂರ್ನಿಗಳಿಂದ ಬಿಡುವು ನೀಡಬೇಕು’ ಎಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.ಪೇಸ್‌ ಕೆಲ ಟೂರ್ನಿಗಳಿಂದ ಹಿಂದೆ ಸರಿದಿರುವುದರಿಂದ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಲಿದ್ದು, ತವರಿನ ಅಭಿಮಾನಿಗಳ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನೆರವಾಗಲಿದೆ  ಎಂದಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry