ಶನಿವಾರ, ಮೇ 8, 2021
18 °C

ಡೇವಿಸ್ ಕಪ್ ಟೆನಿಸ್: ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಂಗನ್, ಉಜ್ಬೇಕಿಸ್ತಾನ (ಪಿಟಿಐ): ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಏಷ್ಯಾ/ಒಸೀನಿಯಾ `ಗುಂಪು 1~ರ ರಿವರ್ಸ್ ಸಿಂಗಲ್ಸ್‌ನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಿತು.ಆದರೆ ಈ ಪಂದ್ಯಗಳಿಗೆ ಯಾವುದೇ ಮಹತ್ವವಿರಲಿಲ್ಲ. ಭಾರತ ತನ್ನ ಸೋಲಿನ ಅಂತರವನ್ನು 2-3ಕ್ಕೆ ತಗ್ಗಿಸಿಕೊಂಡಿತು. ಮೊದಲ ಎರಡು ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಜಯ ಪಡೆದ ಉಜ್ಬೇಕಿಸ್ತಾನ ಶನಿವಾರವೇ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಸೋಲು ಅನುಭವಿಸಿದ ಭಾರತ ಎರಡನೇ ಗುಂಪಿಗೆ ಹಿಂಬಡ್ತಿ ಪಡೆದಿದೆ.ಭಾನುವಾರ ನಡೆದ ರಿವರ್ಸ್ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಯೂಕಿ ಭಾಂಬ್ರಿ ಉಜ್ಬೇಕಿಸ್ತಾನದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಡೆನಿಸ್ ಇಸ್ತೋಮಿನ್‌ಗೆ ಆಘಾತ ನೀಡಿದರು. ಭಾರತದ ಯುವ ಆಟಗಾರ 6-7, 7-6, 7-6 ರಲ್ಲಿ ಎದುರಾಳಿಯನ್ನು ಮಣಿಸಿದರು.ಎರಡನೇ ರಿವರ್ಸ್ ಸಿಂಗಲ್ಸ್‌ನಲ್ಲಿ ರೋಹನ್ ಬೋಪಣ್ಣ 6-2, 6-7, 6-1 ರಲ್ಲಿ ಸರ್ವರ್ ಇಕ್ರಮೋವ್ ವಿರುದ್ಧ ಜಯ ಸಾಧಿಸಿದರು. ಮೊದಲ ಸಿಂಗಲ್ಸ್ ನಲ್ಲಿ ಆಡಿದ್ದ ಸನಮ್ ಸಿಂಗ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಈ ಕಾರಣ ರಿವರ್ಸ್ ಸಿಂಗಲ್ಸ್‌ನಲ್ಲಿ ರೋಹನ್ ಆಡಿದ್ದರು.ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಸೋಲು ಅನುಭವಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.