ಶನಿವಾರ, ಮೇ 8, 2021
20 °C

ಡೇವಿಸ್ ಕಪ್: ಭಾರತದ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಂಗನ್, ಉಜ್ಬೇಕಿಸ್ತಾನ್ (ಐಎಎನ್‌ಎಸ್): ಭಾರತದ ಯೂಕಿ ಭಾಂಬ್ರಿ ಹಾಗೂ ಸನಮ್ ಸಿಂಗ್ ಇಲ್ಲಿ ನಡೆಯುತ್ತಿರುವ ಏಷ್ಯಾ ಒಸಿನಿಯಾ ವಲಯದ ಡೇವಿಸ್ ಕಪ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸೋಲು ಕಂಡರು. ಇದರಿಂದ ಆತಿಥೇಯ ಉಜ್ಬೇಕಿಸ್ತಾನಕ್ಕೆ 2-0ರಲ್ಲಿ ಮುನ್ನಡೆ ಲಭಿಸಿತು.



ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಭಾಂಬ್ರಿ 4-6, 3-6, 3-6ರಲ್ಲಿ ಫಾರೂಕ್ ದುಸ್ತೋವಾ ಮೇಲೂ, ಸನಮ್ 3-6, 2-6, 4-6ರಲ್ಲಿ ಡೇನಿಸ್ ಇಸ್ತೋಮಿನ್ ಎದುರು ನಿರಾಸೆ ಕಂಡರು.



ಗಾಯಗೊಂಡ ಸೋಮದೇವ್ ದೇವವರ್ಮನ್ ಬದಲು ಸ್ಥಾನ ಪಡೆದಿರುವ ಭಾಂಬ್ರಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಅವರು ಶನಿವಾರ ಮೊದಲ ಪಂದ್ಯವನ್ನು ಆಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.