ಬುಧವಾರ, ಏಪ್ರಿಲ್ 21, 2021
31 °C

ಡೇವಿಸ್ ಕಪ್: ಸೋಮ್‌ಗೆ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋವಿ ಸಾದ್, ಸರ್ಬಿಯ (ಪಿಟಿಐ): ಸೋಮ್‌ದೇವ್ ದೇವ್‌ವರ್ಮನ್ ಅವರು ಸರ್ಬಿಯ ವಿರುದ್ಧದ ಡೇವಿಸ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಅಚ್ಚರಿಯ ಗೆಲುವು ಪಡೆದರು. ಶುಕ್ರವಾರ ನಡೆದ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸೋಮ್ 7-5, 7-5, 7-6 ರಲ್ಲಿ ವಿಶ್ವದ 45ನೇ ರ್ಯಾಂಕಿಂಗ್‌ನ ಆಟಗಾರ ಜಾಂಕೊ ತಿಪ್ಸರೆವಿಕ್ ಅವರನ್ನು ಮಣಿಸಿದರು. ಈ ಮೂಲಕ ಭಾರತ 1-1 ರಲ್ಲಿ ಸಮಬಲ ಸಾಧಿಸಿದೆ.ಮೊದಲ ಸಿಂಗಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ವಿಕ್ಟರ್ ಟ್ರಾಯ್ಕಿ ಎದುರು ಪರಾಭವಗೊಂಡಿದ್ದರು. ಇದೀಗ ಡಬಲ್ಸ್ ಮತ್ತು ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿವೆ.ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರ ಅನುಪಸ್ಥಿತಿಯ ಕಾರಣ ಸೋಮ್‌ದೇವ್ ಹಾಗೂ ರೋಹನ್ ಡಬಲ್ಸ್ ವಿಭಾಗದಲ್ಲಿ ಆಡಲಿದ್ದಾರೆ. ಅವರು ನೆನಾದ್ ಜಿಮೋಂಜಿಕ್ ಮತ್ತು ಎಲಿಜಾ ಬೊಜೊಲಾಕ್ ವಿರುದ್ಧ ಪೈಪೋಟಿ ನಡೆಸುವರು.ತಿಪ್ಸರೆವಿಕ್ ವಿರುದ್ಧ ಸೋಮದೇವ್ ಪ್ರಭಾವಿ ಪ್ರದರ್ಶನ ನೀಡಿದರು. ಭಾರತದ ಆಟಗಾರ ಮೊದಲ ಎರಡು ಸೆಟ್‌ಗಳಲ್ಲಿ 1-4 ರಲ್ಲಿ ಹಿನ್ನಡೆ ಸಾಧಿಸಿದ್ದರು. ಆ ಬಳಿಕ ಪುಟಿದೆದ್ದು ನಿಂತು ಗೆಲುವು ಪಡೆದರು. ಮೂರನೇ ಸೆಟ್‌ನಲ್ಲಿ ಟೈಬ್ರೇಕರ್‌ನಲ್ಲಿ ಜಯ ಸಾಧಿಸಿ ಭಾರತಕ್ಕೆ ಸಮಬಲ ತಂದಿತ್ತರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.