ಡೈನಾಸಾರ್ ಅವಶೇಷ ಪತ್ತೆ

7

ಡೈನಾಸಾರ್ ಅವಶೇಷ ಪತ್ತೆ

Published:
Updated:

ವಾಷಿಂಗ್ಟನ್ (ಪಿಟಿಐ): ವಿಶ್ವದ ಮೊದಲ ‘ಒಂದು ಬೆರಳಿನ ಕೈಗಳು’ ಹೊಂದಿದ್ದ  ಡೈನಾಸಾರ್ ಅವಶೇಷವನ್ನು ಪಳೆಯುಳಿಕೆ ತಜ್ಞರು ಸಂಶೋಧಿಸಿದ್ದಾರೆ.

ಈ ಡೈನಾಸಾರ್‌ಗಳು ಕೀಟಭಕ್ಷಕಗಳಾಗಿದ್ದವು. ಇವುಗಳ ಎರಡೂ ಕೈಗಳಲ್ಲಿ ಒಂದೊಂದೇ ಬೆರಳುಗಳು ಕಂಡುಬಂದಿರುವುದು ವಿಶೇಷವಾಗಿದೆ.ಇವುಗಳು ಸುಮಾರು 15 ಅಂಗುಲ ಉದ್ದ, 450 ಗ್ರಾಂ  ತೂಕ ಹೊಂದಿದ್ದುವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಈ ಪ್ರಾಚೀನ ಪ್ರಾಣಿಗಳ ಪಳೆಯುಳಿಕೆಯ ಮಾದರಿ 2008ರಲ್ಲಿ ಮೊದಲ ಬಾರಿಗೆ ಮಂಗೋಲಿಯಾ ನಗರದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಲಭಿಸಿತ್ತು.ಈ ಕಾರಣದಿಂದ ಇದನ್ನು ‘ಲಿನೆನಿಕಸ್ ಮಾನೊಡಾಕ್ಸಿಲಸ್’ ಎಂದು ಹೆಸರಿಸಲಾಗಿತ್ತು.‘ಲಿನೆನಿಕಸ್’ ಊರಿನ ಹೆಸರಾಗಿದ್ದರೆ, ‘ಮಾನೊಡಾಕ್ಸಿಲಸ್’ ಎಂದರೆ  ‘ಒಂದೇ ಬೆರಳಿನ ಕೈ’ ಇರುವ ಪ್ರಾಣಿ ಎಂಬ ಅರ್ಥವನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry