ಸೋಮವಾರ, ಮೇ 23, 2022
20 °C

ಡೊಕೊಮೊದಲ್ಲಿ ಇಂಡಿಕಾಂ ವಿಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೂರಸಂಪರ್ಕ ಕಂಪೆನಿ ಟಾಟಾ ಟೆಲಿಸರ್ವೀಸಸ್ (ಟಿಟಿಎಲ್),  ತನ್ನ `ಸಿಡಿಎಂಎ~ ಜಾಲ ಟಾಟಾ ಇಂಡಿಕಾಂ ಅನ್ನು `ಜಿಎಸ್‌ಎಂ~ ಘಟಕ ಟಾಟಾ ಡೊಕೊಮೊದಲ್ಲಿ ವಿಲೀನಗೊಳಿಸಿದೆ.ಇನ್ನು ಮುಂದೆ ಎಲ್ಲ ಇಂಡಿಕಾಂ ಗ್ರಾಹಕರು `ಟಾಟಾ ಡೊಕೊಮೊ~ ವ್ಯಾಪ್ತಿಗೆ ಬರಲಿದ್ದಾರೆ. ಈ ಹೊಸ ಏಕೀಕೃತ ವೇದಿಕೆಯಲ್ಲಿ `ಸಿಡಿಎಂಎ, ಜಿಎಸ್‌ಎಂ, 3ಜಿ ಮತ್ತು ಫೋಟಾನ್ ಗ್ರಾಹಕರು ಒಂದೇ ಸಂಪರ್ಕ ಜಾಲದಲ್ಲಿ ಸೇವೆಗಳನ್ನು ಪಡೆಯಲಿದ್ದಾರೆ ಎಂದು  ಟಾಟಾ ಟೆಲಿಸರ್ವೀಸಸ್‌ನ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಟಾಟಾ ಇಂಡಿಕಾಂ ಗ್ರಾಹಕರು ಟಾಟಾ ಡೊಕೊಮೊ ಗ್ರಾಹಕರಾಗಿ ತಕ್ಷಣದಿಂದಲೇ ಪರಿವರ್ತನೆ ಹೊಂದಲಿದ್ದಾರೆ. ಅಲ್ಲದೆ, ಕಂಪೆನಿಯ ಎಲ್ಲ ಸೇವೆಗಳೂ `ಟಾಟಾ ಡೊಕೊಮೊ~ ಬ್ರ್ಯಾಂಡ್ ಅಡಿಯಲ್ಲೇ ನಡೆಯುತ್ತವೆ ಎಂದು `ಟಿಟಿಎಲ್~ನ ಕರ್ನಾಟಕ ವೃತ್ತದ ಮುಖ್ಯ ನಿರ್ವಹಣಾ ಅಧಿಕಾರಿ ಎ.ಪಿ ಶ್ರೀರಾಂ ಹೇಳಿದರು.`ಫೋಟಾನ್ ಮ್ಯಾಕ್ಸ್~ ಎಂಬ ಗರಿಷ್ಠ ವೇಗದ ಮೊಬೈಲ್  ಬ್ರಾಡ್‌ಬ್ಯಾಂಡ್  ಸೇವೆಯನ್ನೂ ಕಂಪೆನಿ ಬಿಡುಗಡೆ ಮಾಡಿದೆ. ಸದ್ಯ ಕೋಲ್ಕತ್ತ, ದೆಹಲಿ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಈ ಸೇವೆ ಲಭ್ಯ. ವರ್ಷಾಂತ್ಯಕ್ಕೆ 22 ನಗರಗಳಿಗೆ `ಫೋಟಾನ್ ಮ್ಯಾಕ್ಸ್~  ವಿಸ್ತರಿಸಲಾಗುವುದು ಎಂದು ಯತೀಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.