ಭಾನುವಾರ, ಮೇ 16, 2021
23 °C

ಡೊನೇಷನ್ ಆರೋಪ: ತನಿಖೆಯ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಇಲ್ಲಿನ ಕೆಲವು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಡೊನೇಷನ್ ವಸೂಲು ಮಾಡಿದ್ದಲ್ಲಿ ವಾಪಸ್ ಕೊಡಿಸುವುದಾಗಿ ಬಿಇಒ ಬಿ.ಆರ್.ಬಸವರಾಜಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ನಾಗಾರಾಜ್ ಪಾಳೇಗಾರ್ ಗುರುವಾರ ಧರಣಿ ಸ್ಥಗಿತಗೊಳಿಸಿದರು.ಬಿಇಒ ಆಗಮಿಸಿ ಧರಣಿ ನಿರತರೊಂದಿಗೆ ಮಾತುಕತೆ ನೆಡೆಸಿದರು. ಇಲ್ಲಿನ 6 ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಶಾಲೆ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ.ಒಂದೆರಡು ದಿನದಲ್ಲಿ ಅವರಿಗೆ ಸರ್ಕಾರ ನಿಗದಿ ಪಡಿಸಿದ ಫೀ ಅನ್ನು ನೋಟಿಸ್ ಬೋರ್ಡ್‌ಗೆ ಹಾಕಬೇಕು ಹಾಗೂ ಲೆಕ್ಕಪತ್ರ ನೀಡಲು ತಿಳಿಸಿದ್ದೇನೆ. ಅದರ ಪ್ರತಿ ನೀಡುತ್ತೇನೆ ಎಂದರು.1ರಂದ 5ನೇ ತರಗತಿವರೆಗೆ ಮಾತೃಭಾಷೆ ಕನ್ನಡದಲ್ಲಿ ಬೋಧನೆ ಮಾಡಬೇಕೆಂಬ ನಿಯಮ ಇದೆ. ಆದರೆ ಪೋಷಕರ ಒತ್ತಡಕ್ಕೆ ಮಣಿದು ಆಂಗ್ಲ ಭಾಷೆಯಲ್ಲಿ ಕಲಿಸಲಾಗುತ್ತಿದೆ. 

ಎಲ್ಲ ಶಾಲೆಗಳು ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿಗೆ ಸರ್ಕಾರದ ಸುತ್ತೋಲೆ ಕಳುಹಿಸಲಾಗುವುದು. ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದರು.ಸಮನ್ವಯಾಧಿಕಾರಿ ಚಕ್ರಸಾಲಿ, ಸಿಆರ್‌ಸಿಗಳಾದ ಕುಮಾರ್, ರವೀಂದ್ರಪ್ಪ, ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.