ಡೊನೇಷನ್ ರಹಿತ ಪ್ರವೇಶ: ಡಿಸಿ ಸೂಚನೆ

ಶನಿವಾರ, ಜೂಲೈ 20, 2019
22 °C

ಡೊನೇಷನ್ ರಹಿತ ಪ್ರವೇಶ: ಡಿಸಿ ಸೂಚನೆ

Published:
Updated:

ವಿಜಾಪುರ: ಜಿಲ್ಲೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಡೊನೇಷನ್ ಇಲ್ಲದೆ ಪ್ರವೇಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸೂಚಿಸಿದ್ದಾರೆ.ಜಿಲ್ಲೆಯ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕದ ಜೊತೆಗೆ ಅಧಿಕ ಪ್ರಮಾಣದ ಡೊನೇಷನ್ ಪಡೆದು ಪ್ರವೇಶ ನೀಡ ಲಾಗುತ್ತಿದೆ ಎಂದು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಂಘ-ಸಂಸ್ಥೆ ಗಳಿಂದ ದೂರು ಬಂದಿವೆ ಎಂದು ಹೇಳಿದ್ದಾರೆ.ಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಡೊನೇ ಷನ್ ಪಡೆದು ಪ್ರವೇಶ ನೀಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸ ಲಾಗುವುದು. ಡೊನೇಷನ್ ನೀಡದ ಕಾರಣಕ್ಕೆ ಪ್ರವೇಶ ನಿರಾಕರಿಸಿದರೆ ಆ ವಿದ್ಯಾರ್ಥಿಗಳು ತಕ್ಷಣವೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸ ಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.ವಿಶ್ವ ತಂಬಾಕು ರಹಿತ ದಿನಾಚರಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ರಸ್ತೆ ಸಾರಿಗೆ ನಿಗಮ, ಭಾರತೀಯ ಕುಟುಂಬ ಯೋಜನಾ ಸಂಘ ಮತ್ತಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಇಲ್ಲಿಯ ಸಾರಿಗೆ ಸಂಸ್ಥೆಯ ವರ್ಕ್‌ಶಾಪ್‌ನಲ್ಲಿ ಆಚರಿಸಲಾಯಿತು.ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ನಮಾಜಿ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ನಿಗಮದ ಕಲ್ಯಾಣ ಅಧಿಕಾರಿ ಮಹಿಪಾಲ್ ಬೇಗಾರ, ಬಸವರಾಜ್ ಅಮ್ಮನ್ನವರ, ಎಚ್.ಎಸ್, ಮುನ್ಸಿ ಅತಿಥಿಗಳಾಗಿದ್ದರು.ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ಆರ್. ಬೆಳ್ಳುಬ್ಬಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಎಸ್.ಎನ್. ಹೊಸಮನಿ ವಂದಿಸಿದರು.ಬೀಳ್ಕೊಡುಗೆ: ನಾವು ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣುವುದೇ ನಿಜವಾದ ಸೇವಾ ಧರ್ಮ ಎಂದು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಎಂ.ಟಿ. ಹಿರಂಡಗಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry