ಶುಕ್ರವಾರ, ಮೇ 7, 2021
27 °C

ಡೊನೇಷನ್ ಹಾವಳಿ: ಮೃದುಧೋರಣೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಡೊನೇಷನ್ ಪಡೆಯುತ್ತಿದ್ದ 6 ಶಾಲೆಗಳಿಗೆ ಶಿಕ್ಷಣ ಇಲಾಖೆ ಷೋಕಾಸ್ ನೋಟಿಸ್ ನೀಡಿದ್ದು, ಅದರಲ್ಲಿ ನಾಲ್ಕು ಶಾಲೆಗಳ ಉತ್ತರವನ್ನು ಒಪ್ಪಿಕೊಳ್ಳಲಾಗಿದೆ. ಎರಡು ಶಾಲೆಗಳಿಗೆ ಮರು ನೋಟಿಸ್ ಜಾರಿಗೊಳಿಸಲಾಗಿತ್ತು.ಆದರೆ, ಈಚೆಗೆ `ಡೊನೇಷನ್ ಹಾವಳಿ ನಿಯಂತ್ರಣ ಹೋರಾಟ ಸಮಿತಿ~ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ  ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು ಮೃದುಧೋರಣೆ ಹೊಂದಿರುವುದು ಸ್ಪಷ್ಟವಾಗಿದೆ ಎಂದು ಮುಖಂಡ ಬಿ.ಎಂ. ಸತೀಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ಸಂಬಂಧಿಸಿದ ಶಾಲೆಗಳಿಂದ ಬಂದ ಉತ್ತರಗಳನ್ನು ಜಿಲ್ಲಾಧಿಕಾರಿ ಅವರು ಜಿಲ್ಲಾ ಶಿಕ್ಷಣ ನಿಯಂತ್ರಣ ಸಮಿತಿ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಬೇಕಿತ್ತು. ಆದರೆ, ಡಿಡಿಪಿಐ ರಾಜಶೇಖರ್ ಏಕಪಕ್ಷೀಯವಾಗಿ ತಾವೇ ತೀರ್ಮಾನಿಸಿ 4 ಶಾಲೆಗಳು ನೀಡಿರುವ ಉತ್ತರವನ್ನು ಒಪ್ಪಿ, ಇನ್ನುಳಿದ 2 ಶಾಲೆಗಳಿಗೆ ಮರು ನೋಟಿಸ್ ನೀಡಲು ತೀರ್ಮಾನಿಸಿರುವುದು ಡೊನೇಷನ್ ಪಡೆಯುವ ಶಾಲೆಗಳನ್ನು ಪಾರು ಮಾಡುವ ದುರುದ್ದೇಶ ಹೊಂದಿರುವುದು ಗೋಚರಿಸುತ್ತದೆ.ಪೋಷಕರಿಂದ ನೇರವಾಗಿ ಡೊನೇಷನ್ ಕೇಳುತ್ತಿರುವುದನ್ನು ನಾವು  ದಾಖಲೆ ಸಮೇತ ದೂರು ನೀಡಿದ್ದರೂ ಸಹ,  ಡಿಡಿಪಿಐ ರಾಜಶೇಖರ್ ಸೌಜನ್ಯಕ್ಕೂ ಸಿ.ಡಿ. ದೃಶ್ಯಾವಳಿಗಳನ್ನು ವೀಕ್ಷಿಸಿಲ್ಲ. ಕಾಟಾಚಾರಕ್ಕೆ ಷೋಕಾಸ್ ನೋಟಿಸ್ ಜಾರಿಯ ನಾಟಕವಾಡಿ, ಶಾಲೆಗಳ ಉತ್ತರ ಸಮಪರ್ಕವಾಗಿದೆ ಎಂಬುದಾಗಿ ಕಡತ ಜೋಡಿಸುತ್ತಿದ್ದಾರೆ ಎಂದು ಅವರು ದೂರಿದರು. ಡೊನೇಷನ್ ಹಾವಳಿಗೆ ಸಂಬಂಧಿಸಿದಂತೆ ದೂರು ಬಂದರೆ ಕ್ರಮಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಸಂಬಂಧಿಸಿದ ಶಾಲೆಗಳ ಮಾನ್ಯತೆ ರದ್ದು ಮಾಡುವುದಾಗಿ ಡಿಡಿಪಿಐ ರಾಜಶೇಖರ್ ಬಹುಹಿರಂಗ ಹೇಳಿಕೆ ನೀಡಿದ್ದರು. ಆದರೆ, ಹೋರಾಟ ಸಮಿತಿ ನೀಡಿದ್ದ ದೂರಿಗೆ ಷೋಕಾಸ್ ನೋಟಿಸ್ ನೀಡುವ ನಾಟಕ ಮಾಡಿ, ಸಂಬಂಧಿಸಿದ ಶಾಲೆಗಳಿಂದ ಬಂದಿರುವ ಉತ್ತರ ಸಮಂಜಸವಾಗಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಇದು ಖಂಡನೀಯ ಎಂದರು.ನಗರದ ಪ್ರತಿಷ್ಠಿತ 15 ಖಾಸಗಿ ಶಾಲೆಗಳು ಪ್ರತಿ ತರಗತಿಗೆ ಎಷ್ಟು ಶುಲ್ಕ ಪಡೆಯಬೇಕು ಎಂಬುದರ ಬಗ್ಗೆ ಅನುಮೋದಿತ ಪಟ್ಟಿ ಬಿಡುಗಡೆ ಮಾಡುವುದಾಗಿ ಡಿಡಿಪಿಐ ರಾಜಶೇಖರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ, ಅನುಮೋದಿತಪಟ್ಟಿ ಇದುವರೆಗೂ ಸಿದ್ಧಗೊಂಡಿಲ್ಲ. ಪ್ರತಿಬ್ಲಾಕ್‌ಮಟ್ಟದಲ್ಲಿ ವಿಚಕ್ಷಣಾ ದಳ ರಚನೆ ಮಾಡುವುದಾಗಿ ಹೇಳಿದ್ದರು. ಆದರೆ, ವಿಚಕ್ಷಣಾದಳ ಇನ್ನೂ ರಚನೆಯಾಗಿಲ್ಲ ಎಂದರು.ಶಾಸಗಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನಿಯಮಾನುಸಾರ ವೇತನ ನೀಡುತ್ತಿಲ್ಲ. ಅನೇಕ ಶಾಲೆಗಳು ಡಿಸಿಎಚ್/ಬಿ.ಇಡಿ ತರಬೇತಿ ಪಡೆದ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ ಎಂದು ಅವರು ಆರೋಪಿಸಿದರು.ಒಟ್ಟಿನಲ್ಲಿ ಡೊನೇಷನ್  ಪಡೆಯುವ ಶಾಲೆಗಳ ಬಗ್ಗೆ ಮೃದುಧೋರಣೆ ತಾಳಿರುವ ಡಿಡಿಪಿಐ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಏ. 26ರಂದು ಬೆಳಿಗ್ಗೆ 10.30ಕ್ಕೆ ಡೊನೇಷನ್ ಹಾವಳಿ ನಿಯಂತ್ರಣ ಹೋರಾಟ ಸಮಿತಿ ವತಿಯಿಂದ ಬೀರಲಿಂಗೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.ಎಂ.ಎಸ್. ರಾಮೇಗೌಡ, ಅತ್ತಿಗೆರೆ ಮಂಜುನಾಥ್, ಆಲೂರು ರಾಜಶೇಖರ್, ಕೆ.ಪಿ. ಗೋಪಾಲಗೌಡ್ರು, ವಾಲ್ಮೀಕಿ ಕೃಷ್ಣ, ಎ. ಅಮಾನುಲ್ಲಾಖಾನ್, ಕೋರ್ಟ್ ಅಕ್ಬರ್, ಕೆ.ಪಿ. ಸುನಂದಾ, ಎಂ. ಪ್ರೇಮಾಲತಾ, ಕಂಚಿಕೆರೆ ನಾಗರಾಜ್, ಗೋಣಿವಾಡ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.