ಡ್ಯಾನ್ಸ್ ಮಾಡಲೊಪ್ಪದ ಸಚಿವ ಬೆಳಮಗಿ!

7

ಡ್ಯಾನ್ಸ್ ಮಾಡಲೊಪ್ಪದ ಸಚಿವ ಬೆಳಮಗಿ!

Published:
Updated:

ಬೀದರ್: ಮಹಾತ್ಮರ ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ `ಜೋಶ್~ ತುಂಬುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯಲ್ಲಿ ಮಾತ್ರ ಡ್ಯಾನ್ಸ್ ಮಾಡಲು ಸುತಾರಾಂ ಒಪ್ಪಲಿಲ್ಲ.ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ಹಾಯ್ದು ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿತು. ಆಗ ಸಹಜವಾಗಿಯೇ ನರ್ತನಕ್ಕೆ ಸಾಥ್ ನೀಡುತ್ತಿದ್ದ ಸಚಿವ ಬೆಳಮಗಿ ಅವರನ್ನು ಶಾಸಕ ಬಂಡೆಪ್ಪ ಕಾಶೆಂಪೂರ್ ನರ್ತಿಸಲು ಆಹ್ವಾನಿಸಿದರು. ಸ್ಥಳದಲ್ಲಿದ್ದ ಗಣ್ಯರು ಕೂಡ ಮನವಿ ಮಾಡಿದರು.

ಆದರೆ, ಸಚಿವರು ಮಾತ್ರ `ಸ್ಟೆಪ್ಸ್~ ಹಾಕಲೇ ಇಲ್ಲ. ಪ್ರತಿಯಾಗಿ ಕೊರಳಲ್ಲಿ ಡೊಳ್ಳು ಹಾಕಿಕೊಂಡು ಬಾರಿಸುವ ಮೂಲಕ ನೆರೆದವರನ್ನು ಪುಳುಕಿತಗೊಳಿಸಿದರು.ಕೊನೆಗೆ ಶಾಸಕ ಕಾಶೆಂಪೂರ್ ಡ್ಯಾನ್ಸ್ ಆರಂಭಿಸಿದಾಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮತ್ತಿತರರು ಸಾಥ್ ಕೊಟ್ಟರು.ಮೆರವಣಿಗೆಯ ಬಳಿಕ ಜಿಲ್ಲಾ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ರೇವು ನಾಯಕ್ ಬೆಳಮಗಿ ಏಕೆ ಡ್ಯಾನ್ಸ್ ಮಾಡಲಿಲ್ಲ ಎನ್ನುವ ರಹಸ್ಯವನ್ನು ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು. ನನಗೂ ಡ್ಯಾನ್ಸ್ ಮಾಡುವ ಆಸೆಯಿತ್ತು. ಆದರೆ, ರಾಜ್ಯ ನಾಯಕರು ಡ್ಯಾನ್ಸ್ ಮಾಡದಂತೆ ಸೂಚಿಸಿದ್ದಾರೆ. ಹೀಗಾಗಿ ಕುಣಿಯಲಿಲ್ಲ ಎಂದು ತಿಳಿಸಿದರು.ನಂತರ ಮಾತನಾಡಿದ ಬಂಡೆಪ್ಪ ಕಾಶೆಂಪೂರ್ ಅವರು, ನೀವು ಡ್ಯಾನ್ಸ್ ಹೊಡೆಯಲೇಬೇಕು. ಮುಂಬರುವ ಕನಕ ಜಯಂತಿಯಲ್ಲಿ ಕುಣಿಯಲೇಬೇಕು. ಅಗತ್ಯ ಬಿದ್ದರೆ ನಿಮ್ಮ ನಾಯಕರ ಬಳಿ ನಿಯೋಗ ಕರೆದೊಯ್ದು ಒತ್ತಡ ಹೇರಲಾಗುತ್ತದೆ ಎಂದು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ನಗೆಯ ಅಲೆ ಸೃಷ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry