ಬುಧವಾರ, ಅಕ್ಟೋಬರ್ 23, 2019
27 °C

ಡ್ಯೂರೊ ಡಿಜೆಡ್ ಸ್ಕೂಟರ್

Published:
Updated:

ಬೆಂಗಳೂರು: ಮಹೀಂದ್ರಾ  ಟು ವೀಲರ್ಸ್, ಗಡುಸು ರಸ್ತೆಗಳಲ್ಲಿನ ಬಳಕೆಗಾಗಿಯೇ ವಿಶೇಷವಾಗಿ ರೂಪಿಸಿರುವ ಹೊಸ ಸ್ಕೂಟರ್ `ಡ್ಯೂರೊ ಡಿಜೆಡ್~ ಅನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.125 ಸಿಸಿ ಸಾಮರ್ಥ್ಯದ ಎಂಜಿನ್ ಒಳಗೊಂಡಿರುವ ಈ ಸ್ಕೂಟರ್, ಇದೇ ಸಾಮರ್ಥ್ಯದ ಇತರ ಸ್ಕೂಟರ್‌ಗಳಿಗಿಂತ ಹೆಚ್ಚಿನ ಇಂಧನ ಕಾರ್ಯಕ್ಷಮತೆ ಹೊಂದಿದೆ ಎಂದು ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಧಮೇಂದ್ರ ಮಿಶ್ರಾ, ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಗ್ರಾಹಕರ ಅಭಿಪ್ರಾಯ ಪರಿಗಣಿಸಿ ಈ  ಸ್ಕೂಟರ್‌ನಲ್ಲಿ ಸುರಕ್ಷಿತ ಚಾಲನೆಗಾಗಿ ಹಲವಾರು ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಈ ಸ್ಕೂಟರ್ ಪ್ರತಿ ಲೀಟರ್‌ಗೆ 42 ರಿಂದ 45 ಕಿ. ಮೀ ದೂರ ಕ್ರಮಿಸುವ ಇಂಧನ ಕ್ಷಮತೆ ಹೊಂದಿದೆ. ಎರಡು ಹೊಸ ಬಣ್ಣಗಳೂ ಸೇರಿದಂತೆ ಒಟ್ಟು 7 ವರ್ಣಗಳಲ್ಲಿ ಲಭ್ಯ ಇದೆ.ರಾಜ್ಯದಲ್ಲಿ ಇದರ ಬೆಲೆ ್ಙ 44,760 (ಎಕ್ಸ್ ಷೋರೂಂ) ಇದೆ. ಬಾಲಿವುಡ್  ನಟಿ ಕರೀನಾ ಕಪೂರ್, ಈ ಸ್ಕೂಟರ್‌ನ ಪ್ರಚಾರ ರಾಯಭಾರಿ ಆಗಿದ್ದಾರೆ ಎಂದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)