ಡ್ರಾಪ್‌ ನೆಪ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

7

ಡ್ರಾಪ್‌ ನೆಪ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

Published:
Updated:

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ 11 ವರ್ಷದ ಬಾಲಕಿಯನ್ನು ಉದ್ಯಾನಕ್ಕೆ ಕರೆದೊಯ್ದು ಅತ್ಯಾಚಾರ ಮಾಡ ಲೆತ್ನಿಸಿದ ಸುರೇಶ್‌ಬಾಬು (29) ಎಂಬ ಆಟೊ ಚಾಲಕನನ್ನು ಸಾರ್ವಜನಿಕರೇ ಹಿಡಿದು ಮಲ್ಲೇಶ್ವರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಶ್ರೀರಾಂಪುರ ಸಮೀಪದ ನಾರಾಯಣಪುರದ ಸುರೇಶ್‌ ಬಾಬು, ದೇವರಜೀವನಹಳ್ಳಿಯ ಬಾಲಕಿಯ ಮೇಲೆ ಅತ್ಯಾ ಚಾರ ಮಾಡಲೆತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳವಾರ ಮಧ್ಯಾಹ್ನ ಬಾಲಕಿ ಮೆಜೆಸ್ಟಿಕ್‌ ಸಮೀಪ ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಟೊದಲ್ಲಿ ಬಂದ ಆರೋಪಿ ಸುರೇಶ್‌ಬಾಬು, ಸಿಟಿ ಮಾರುಕಟ್ಟೆಗೆ ಡ್ರಾಪ್‌ ಮಾಡು ವು ದಾಗಿ ಹೇಳಿ ಬಾಲಕಿಯನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾನೆ. ನಂತರ ಮಲ್ಲೇಶ್ವರ ಕೆ.ಸಿ.ಜೆ ಉದ್ಯಾನಕ್ಕೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಲೆತ್ನಿಸಿದ್ದಾನೆ. ಆಗ ಬಾಲಕಿ ನೆರವಿಗಾಗಿ ಕೂಗಿಕೊಂಡಿದ್ದಾಳೆ. ಸಮೀಪದಲ್ಲೇ ಇದ್ದ ಸಾರ್ವ ಜನಿಕರು ಆರೋಪಿಯನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry