ಡ್ರಾ ಪಂದ್ಯದಲ್ಲಿ ಆನಂದ್

7

ಡ್ರಾ ಪಂದ್ಯದಲ್ಲಿ ಆನಂದ್

Published:
Updated:

ವಿಕ್ ಆನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ 73ನೇ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಏಳನೇ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಜೊತೆ ಡ್ರಾ ಮಾಡಿಕೊಂಡರು.ಇದೀಗ ಭಾರತದ ಗ್ರ್ಯಾಂಡ್‌ಮಾಸ್ಟರ್ ಒಟ್ಟು ಐದು ಪಾಯಿಂಟ್ ಹೊಂದಿದ್ದಾರೆ.ಆದರೆ ಅವರು ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.ಆರನೇ ಸುತ್ತಿನ ಕೊನೆಯಲ್ಲಿ ಆನಂದ್ ಅಮೆರಿಕದ ಹಿಕರು ನಕಮುರ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ, ನಕಮುರ ಏಳನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ಜಾನ್ ಸ್ಮೀರ್ಟ್ಸ್ ಅವರನ್ನು ಮಣಿಸಿ 5.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.ಅರ್ಮೇನಿಯದ ಲೆವೊನ್ ಅರೋನಿಯನ್ ಮತ್ತು ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಅವರು ತಲಾ 4.5 ಪಾಯಿಂಟ್‌ಗಳೊಂದಿಗೆ ಮೂರ ನೇ ಸ್ಥಾನದಲ್ಲಿದ್ದಾರೆ. ಅರೋನಿಯನ್ ಅವರು ರಷ್ಯಾದ ಅಲೆಕ್ಸಾಂಡರ್ ಗ್ರಿಸ್ಚುಕ್ ವಿರುದ್ಧ ಗೆಲುವು ಪಡೆದರೆ, ಕ್ರಾಮ್ನಿಕ್ ಅವರು ಹಾಲೆಂಡ್‌ನ ಅನೀಶ್ ಗಿರಿ ಅವರನ್ನು ಮಣಿಸಿದರು.ಆನಂದ್ ಮತ್ತು ಕಾರ್ಲ್‌ಸನ್ ನಡುವಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಉಭಯ ಆಟಗಾರರು ಅಪಾಯವನ್ನು ಆಹ್ವಾನಿಸಲು ಮುಂದಾಗಲಿಲ್ಲ. ಎಚ್ಚರಿಕೆಯ ಆಟವಾಡಿ 18 ನಡೆಗಳ ಬಳಿಕ ಪಾಯಿಂಟ್ ಹಂಚಿಕೊಳ್ಳಲು ನಿರ್ಧರಿಸಿದರು.‘ಬಿ’ ಗುಂಪಿನ ಏಳನೇ ಸುತ್ತಿನ ಪಂದ್ಯದಲ್ಲಿ ಸೂರ್ಯಶೇಖರ್ ಗಂಗೂ ಲಿ ಅವರು ಹಾಲೆಂಡ್‌ನ ವೋಟೆರ್ ಸ್ಪೋಲ್‌ಮನ್ ವಿರುದ್ಧ ಜಯ ಸಾಧಿಸಿದರು.‘ಸಿ’ ಗುಂಪಿನಲ್ಲಿ ಕಣದಲ್ಲಿರುವ ಭಾರತದ ತಾನಿಯಾ ಸಚ್‌ದೇವ್ ಏಳನೇ ಸುತ್ತಿನ ಪಂದ್ಯದಲ್ಲಿ ಕಜಕಿಸ್ತಾನದ ಮುರ್ತಾಜ್ ಕಜಗಲ್‌ಯೇವ್ ಎದುರು ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry