ಡ್ರಾ ಪಂದ್ಯದಲ್ಲಿ ಪೋಸ್ಟಲ್

ಶನಿವಾರ, ಜೂಲೈ 20, 2019
22 °C

ಡ್ರಾ ಪಂದ್ಯದಲ್ಲಿ ಪೋಸ್ಟಲ್

Published:
Updated:

ಬೆಂಗಳೂರು: ಪೋಸ್ಟಲ್ ಫುಟ್‌ಬಾಲ್ ಕ್ಲಬ್ ಹಾಗೂ ಸಿಐಎಲ್ ತಂಡಗಳ ನಡುವೆ ಇಲ್ಲಿ ನಡೆದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಗೋಲು ರಹಿತ ಡ್ರಾನಲ್ಲಿ ಕೊನೆಗೊಂಡಿತು.ಅಶೋಕನಗರದಲ್ಲಿರುವ ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಗಳಿಸಲು ನಡೆಸಿದ ಯತ್ನದಲ್ಲಿ ಸಫಲರಾಗಲಿಲ್ಲ. ಪೋಸ್ಟಲ್ 9 ಪಂದ್ಯಗಳಿಂದ 11 ಪಾಯಿಂಟ್ ಗಳಿಸಿ ತನ್ನ ಅಭಿಯಾನ ಅಂತ್ಯಗೊಳಿಸಿತು. ಇಷ್ಟೇ ಪಂದ್ಯಗಳಿಂದ ಸಿಐಎಲ್ ಏಳು ಪಾಯಿಂಟ್ ಹೊಂದಿದೆ. ಹಿಂಬಡ್ತಿ ಪಡೆಯುವ ಅಪಾಯದಿಂದ ಪಾರಾಗಲು ಈ ತಂಡಕ್ಕೆ ಮುಂದಿನ ಪಂದ್ಯಗಳು ತುಂಬಾ ಪ್ರಾಮುಖ್ಯ ಪಡೆದುಕೊಂಡಿವೆ.ಎಸ್‌ಡಬ್ಲ್ಯುಆರ್‌ಗೆ ಜಯ: ಎಸ್‌ಡಬ್ಲ್ಯುಆರ್ ತಂಡದವರು `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ 2-1 ಗೋಲುಗಳಿಂದ ಧರ್ಮರಾಜ ಯೂನಿಯನ್ ತಂಡವನ್ನು ಮಣಿಸಿದರು. ಎಸ್‌ಡಬ್ಲ್ಯುಆರ್ ತಂಡದ ನಿಖಿಲ್ (32ನೇ ಹಾಗೂ 71ನೇ ನಿ.) ಗೋಲು ಗಳಿಸಿದರು. ಸೋಲುಕಂಡ ಯೂನಿಯನ್ ತಂಡದ ಸೆಲ್ವಾ 38ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry