ಡ್ರಾ ಪಂದ್ಯದಲ್ಲಿ ಪೋಸ್ಟಲ್

7
ಫುಟ್‌ಬಾಲ್: ಎಜಿಒಆರ್‌ಸಿ ತಂಡಕ್ಕೆ ಜಯ

ಡ್ರಾ ಪಂದ್ಯದಲ್ಲಿ ಪೋಸ್ಟಲ್

Published:
Updated:
ಡ್ರಾ ಪಂದ್ಯದಲ್ಲಿ ಪೋಸ್ಟಲ್

ಬೆಂಗಳೂರು: ಪೋಸ್ಟಲ್ ಮತ್ತು ಸ್ಟೂಡೆಂಟ್ಸ್ ಯೂನಿಯನ್ ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲಿನ ಡ್ರಾದಲ್ಲಿ ಅಂತ್ಯಕಂಡಿತು.ಅಶೋಕ ನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ 43ನೇ ನಿಮಿಷದಲ್ಲಿ ಜಯವಂದನ್ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಸ್ಟೂಡೆಂಟ್ಸ್ ಯೂನಿಯನ್‌ಗೆ ಮುನ್ನಡೆ ತಂದಿತ್ತರು. ಪೋಸ್ಟಲ್‌ನ ಸುಬ್ಬಾ ಚೆಂಡನ್ನು ಕೈಯಿಂದ ತಡೆದದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು.ಆದರೆ ಪಂದ್ಯದ 82ನೇ ನಿಮಿಷದಲ್ಲಿ ಪೋಸ್ಟಲ್ ತಂಡದ ಕೇವಲ್ ಲಾಮಾ ಚೆಂಡನ್ನು ಗುರಿ ಸೇರಿಸಿದರಲ್ಲದೆ, ಎದುರಾಳಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು. ಶ್ರೀನಿವಾಸನ್ ನೀಡಿದ ಪಾಸ್‌ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಲಾಮಾ ಎದುರಾಳಿ ಗೋಲ್‌ಕೀಪರ್‌ನ್ನು ತಪ್ಪಿಸುವಲ್ಲಿ ಯಶ ಕಂಡರು.ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡವು. ಇದೀಗ ಆರು ಪಂದ್ಯಗಳನ್ನು ಆಡಿರುವ ಪೋಸ್ಟಲ್ ಏಳು ಪಾಯಿಂಟ್‌ಗಳನ್ನು ಹೊಂದಿದ್ದರೆ, ಸ್ಟೂಡೆಂಟ್ಸ್ ಯೂನಿಯನ್ ಏಳು ಪಂದ್ಯಗಳಿಂದ ಐದು ಪಾಯಿಂಟ್‌ಗಳನ್ನು ಕಲೆಹಾಕಿದೆ.ಎಜಿಒಆರ್‌ಸಿಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಜಿಒಆರ್‌ಸಿ ತಂಡ 1-0 ಗೋಲಿನಿಂದ ಎಲ್‌ಆರ್‌ಡಿಇ ವಿರುದ್ಧ ಗೆಲುವು ಪಡೆಯಿತು. ಪಂದ್ಯದ 31ನೇ ನಿಮಿಷದಲ್ಲಿ ಮುರಳೀಧರನ್ ಗೋಲು ಗಳಿಸಿ ಎಜಿಒಆರ್‌ಸಿ ಗೆಲುವಿಗೆ ಕಾರಣರಾದರು.ಶನಿವಾರ ನಡೆಯುವ ಪಂದ್ಯಗಳಲ್ಲಿ ಸಿಐಎಲ್- ಎಸ್‌ಎಐ ಹಾಗೂ ಎಂಇಜಿ- ಡಿವೈಎಸ್‌ಎಸ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry