ಡ್ರಾ ಪಂದ್ಯದಲ್ಲಿ ಸಂಯುಕ್ತ ತಂಡ

7

ಡ್ರಾ ಪಂದ್ಯದಲ್ಲಿ ಸಂಯುಕ್ತ ತಂಡ

Published:
Updated:

ಬೆಂಗಳೂರು: ಸಂಯುಕ್ತ ನಗರ ಇಲೆವೆನ್ ತಂಡದ ಬೌಲರ್‌ಗಳ ದಾಳಿಯನ್ನು ಎದುರಿಸಿ ನಿಲ್ಲಲು ಪರದಾಡಿದ ಬೆಂಗಳೂರು ನಗರ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್ ಟೂರ್ನಿಯ (19 ವರ್ಷದೊಳಗಿನವರು) ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿತು. ಆದರೆ, ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.ಸಂಯುಕ್ತ ನಗರ ತಂಡ ಶರತ್ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 348 ರನ್ ಗಳಿಸಿತ್ತು. ನಗರ ತಂಡ 68 ಓವರ್‌ಗಳಲ್ಲಿ 221 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಎರಡು ದಿನಗಳ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಂಯುಕ್ತ ನಗರ 30 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಇನಿಂಗ್ಸ್ ಮುನ್ನಡೆ ಸಾಧಿಸಿದ ಈ ತಂಡ ಮೂರು ಪಾಯಿಂಟ್ ಪಡೆದರೆ, ನಗರ ತಂಡ ಒಂದು ಪಾಯಿಂಟ್ ಗಳಿಸಿತು.ಸಂಕ್ಷಿಪ್ತ ಸ್ಕೋರು: ಸಂಯುಕ್ತ ನಗರ ಇಲೆವೆನ್ 72.5 ಓವರ್‌ಗಳಲ್ಲಿ 348 ಹಾಗೂ ಎರಡನೇ ಇನಿಂಗ್ಸ್ 30 ಓವರ್‌ಗಳಲ್ಲಿ 3 ವಿಕೆಟ್‌ಗೆ 90. (ಬಿ.ಆರ್. ಶರತ್ 32, ಪ್ರದೀಪ್ 29ಕ್ಕೆ2). ಬೆಂಗಳೂರು ನಗರ ಇಲೆವೆನ್: 68 ಓವರ್‌ಗಳಲ್ಲಿ 221. (ಅಮಿತ್ ಚಾಂದ್ 28, ಎಂ.ಆರ್. ಸಚಿನ್ 63, ಜಿ. ಸಚಿನ್ 68; ರಾಜ್ ಗಾಲಾ 33ಕ್ಕೆ3).ಅಧ್ಯಕ್ಷರ ಇಲೆವೆನ್ 69.5 ಓವರ್‌ಗಳಲ್ಲಿ 193 ಹಾಗೂ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 11. ಸಂಯುಕ್ತ ಮೊಫಿಷಿಯಲ್ ಇಲೆವೆನ್ 30 ಓವರ್‌ಗಳಲ್ಲಿ 68 ಮತ್ತು 7.4 ಓವರ್‌ಗಳಲ್ಲಿ 133. ಫಲಿತಾಂಶ: ಅಧ್ಯಕ್ಷರ ಇಲೆವೆನ್ ತಂಡಕ್ಕೆ 10 ವಿಕೆಟ್ ಗೆಲುವು ಹಾಗೂ 5 ಪಾಯಿಂಟ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry