ಡ್ರಾ ಪಂದ್ಯದಲ್ಲಿ ಸೌತ್ ಯುನೈಟೆಡ್

7
ಫುಟ್‌ಬಾಲ್

ಡ್ರಾ ಪಂದ್ಯದಲ್ಲಿ ಸೌತ್ ಯುನೈಟೆಡ್

Published:
Updated:

ಬೆಂಗಳೂರು: ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಮತ್ತು ಕೆಜಿಎಫ್ ಅಕಾಡೆಮಿ ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಐದನೇ ನಿಮಿಷದಲ್ಲಿ ರಾಜೇಶ್ ಗೋಲು ಗಳಿಸಿ ಕೆಜಿಎಫ್‌ಗೆ ಮುನ್ನಡೆ ತಂದಿತ್ತರು. ಆದರೆ ಸೌತ್ ಯುನೈಟೆಡ್ ಮಣಿವಣ್ಣನ್ ತಂದಿತ್ತ ಗೋಲಿನ ನೆರವಿನಿಂದ ಡ್ರಾ ಸಾಧಿಸಿತು.ಎಲ್‌ಆರ್‌ಡಿಇ ಮತ್ತು ಬಿಯುಎಫ್‌ಸಿ ನಡುವಿನ `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.ಸೋಮವಾರದ ಪಂದ್ಯಗಳಲ್ಲಿ ಪೋಸ್ಟಲ್- ಡಿವೈಎಸ್‌ಎಸ್ ಮತ್ತು ಬೆಂಗಳೂರು ಮಾರ್ಸ್‌- ಎಸ್‌ಎಐ ಎದುರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry