ಸೋಮವಾರ, ಮೇ 17, 2021
27 °C

ಡ್ರೀಮ್‌ಲೈನರ್ ತುರ್ತು ಭೂಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್‌ಏಂಜಲೀಸ್(ಎಎಫ್‌ಪಿ): ಬ್ರೇಕ್ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಅಮೆರಿಕದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಭಾನುವಾರ ನಡೆದಿದೆ. ಭೂಸ್ಪರ್ಶಕ್ಕೂ ಮೂರು ಗಂಟೆ ಮೊದಲು ವಿಮಾನ ಹಾರಾಟ ಆರಂಭಿಸಿತ್ತು.ಹ್ಯೂಸ್ಟನ್ ಹಾಗೂ ಡೆನ್ವರ್ ನಡುವೆ ಸಂಚರಿಸುವ ವಿಮಾನದ ಬ್ರೇಕ್ ಇಂಡಿಕೇಟರ್‌ನಲ್ಲಿ ತೊಂದರೆ ಕಾಣಿಸಿಕೊಂಡ ನಂತರ ವಿಮಾನ ಡೆನ್ವರ್ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ವಿಮಾನಯಾನ ಕಂಪೆನಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ಇಳಿಸಲಾಯಿತು. ನಿರ್ವಹಣಾ ತಂಡ ವಿಮಾನವನ್ನು ಪರಿಶೀಲನೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬ್ಯಾಟರಿಗಳಲ್ಲಿ ತೊಂದರೆ ಕಾಣಿಸಿಕೊಂಡ ನಂತರ ಡ್ರೀಮ್‌ಲೈನರ್ ಒಂದು ಸರಣಿಯ ವಿಮಾನಗಳ ಹಾರಾಟವನ್ನು  4 ತಿಂಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಜಗತ್ತಿನಾದ್ಯಂತ ಬೋಯಿಂಗ್‌ನ ಡ್ರೀಮ್‌ಲೈನರ್ ವಿಮಾನ ಬಳಸುತ್ತಿರುವ ಏರ್‌ಲೈನ್ಸ್‌ಗಳು ಒಂದಿಲ್ಲೊಂದು ತೊಂದರೆ ಎದುರಿಸುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.