ಡ್ರೋಣ್ ಉರುಳಿಸಿದ ಇಸ್ರೇಲ್

7

ಡ್ರೋಣ್ ಉರುಳಿಸಿದ ಇಸ್ರೇಲ್

Published:
Updated:

ಜೆರುಸಲೇಂ (ಎಎಫ್‌ಪಿ): ರಾಷ್ಟ್ರದ ವಾಯು ಗಡಿ ಉಲ್ಲಂಘಿಸಿದ ಅಪರಿಚಿತ ಡ್ರೋಣ್ ವಿಮಾನವನ್ನು ಇಸ್ರೇಲ್ ವಾಯು ಪಡೆ ಹೊಡೆದುರುಳಿಸಿದೆ.ಮಾನವರಹಿತ ಡ್ರೋಣ್ ವಿಮಾನವು ಇಸ್ರೇಲ್ ವಾಯುಗಡಿ ಉಲ್ಲಂಘಿಸಿ ಮೆಡಿಟೇರಿಯನ್ ಸಮುದ್ರದ ಮೇಲಿನಿಂದ ಹಾರಾಡುತ್ತಿರುವುದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ವಾಯುಪಡೆ ಯೋಧರು ಅದನ್ನು ಹೊಡೆದು ಉರುಳಿಸಿದರು ಎಂದು ಮೂಲಗಳು ತಿಳಿಸಿವೆ.ಈಗ ಯೋಧರು ಡ್ರೋಣ್ ಬಿದ್ದಿರುವ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಅವಶೇಷಗಳು ಪತ್ತೆಯಾದ ನಂತರ ಅದು ಯಾವ ದೇಶಕ್ಕೆ ಸೇರಿದ್ದು ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry