ಡ್ರೋಣ್ ದಾಳಿ ವಿರುದ್ಧ ಪ್ರತಿಭಟನೆ

7

ಡ್ರೋಣ್ ದಾಳಿ ವಿರುದ್ಧ ಪ್ರತಿಭಟನೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ದಕ್ಷಿಣ ವಾಜಿರಿಸ್ತಾನದ ಮೇಲೆ ಅಮೆರಿಕ ಪದೇಪದೇ ನಡೆಸುತ್ತಿರುವ ಡ್ರೋಣ್ ದಾಳಿ ವಿರೋಧಿಸಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಮೊದಲ ಹಂತದ ಮೆರವಣಿಗೆ ಶಾಂತಿಯುವಾಗಿ ಮುಕ್ತಾಯಗೊಂಡಿತು.ಮೆರವಣಿಗೆಯಲ್ಲಿ ಮಾಜಿ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಸೇರಿದಂತೆ ತೆಹರಿಕ್-ಎ- ಇನ್ಸಾಫ್ ಪಕ್ಷದ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಶನಿವಾರ ನೂರಾರು ವಾಹನಗಳ ಮೂಲಕ ಇಸ್ಲಾಮಾಬಾದ್‌ನಿಂದ ಹೊರಟ ಮೆರವಣಿಗೆ ರಾತ್ರಿ ಖೈಬರ್- ಪಕ್ತುಂಕ್ವಾ ಪ್ರಾಂತ್ಯವನ್ನು ಪ್ರವೇಶಿಸಿತು. ಮುಂದಿನ ಹಂತದಲ್ಲಿ ಟ್ಯಾಂಕ್ ಟೌನ್ ಮೂಲಕ  ಮೆರವಣಿಗೆ ಮುಂದುವರಿಸಲಿದ್ದು ಕೊಟಕೋಯಿ ಪ್ರದೇಶದಲ್ಲಿ ಇದು ಮುಕ್ತಾಯಗೊಳ್ಳಬೇಕಿದೆ.ಏಕೆಂದರೆ `ರಾಜ್ಯಪಾಲರ ಆದೇಶದಂತೆ ಖೈಬರ್ ಪಕ್ತುಂಕ್ವಾ ಪ್ರಾಂತ್ಯಕ್ಕೆ ಮೆರವಣಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ~  ಎಂದು ಸಮಾಚಾರ ಖಾತೆಯ ಸಚಿವ ಇಫ್ತಿಕಾರ್ ಹಸಿನ್ ಅವರು ತಿಳಿಸಿದ್ದಾರೆ.

`ಈ ಶಾಂತಿ ಮೆರವಣಿಗೆಗೆ ತಾಲಿಬಾನ್ ಉಗ್ರರು ಯಾವುದೇ ಬೆದರಿಕೆ ಹಾಕಿಲ್ಲ. ಆದರೆ ಸರ್ಕಾರ ಉಗ್ರರ ಸಂಭಾವ್ಯ ದಾಳಿಯ ನೆಪವೊಡ್ಡಿ ಮೆರವಣಿಗೆಯನ್ನು ನಿಲ್ಲಿಸಲು ಯತ್ನಿಸುತ್ತಿದೆ~ ಎಂದು ಖಾನ್ ಶನಿವಾರ ಆಪಾದಿಸಿದ್ದರು. ಶಾಂತಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜನರನ್ನು ಉದ್ದೇಶಿಸಿ ಮಾತನಾಡಿದ ಖಾನ್ `ಡ್ರೋಣ್ ದಾಳಿಯ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಮ್ಮ ಉದ್ದೇಶ ಭಾಗಶಃ ಸಫಲಗೊಂಡಿದೆ. ಇಡೀ ವಿಶ್ವವೇ ನಮ್ಮ ಕಾರ್ಯವನ್ನು ಮೆಚ್ಚಿಕೊಂಡಿದೆ. ಮಾಧ್ಯಮಗಳೂ ಡ್ರೋಣ್ ದಾಳಿಯನ್ನು ವಿರೋಧಿಸಿ ವರದಿ ಬಿತ್ತರಿಸುತ್ತಿವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಅಮೆರಿಕ ಪ್ರಜೆಗಳ ಬೆಂಬಲ: ಇಮ್ರಾನ್ ಖಾನ್ ಆರಂಭಿಸಿರುವ ಶಾಂತಿ ಮೆರವಣಿಗೆಯಲ್ಲಿ ಪಾಕಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳೂ ಭಾಗವಹಿಸಿದ್ದು,  ಡ್ರೋಣ್ ದಾಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 32 ಅಮೆರಿಕ ಪ್ರಜೆಗಳು `ಡ್ರೋಣ್ ದಾಳಿಯನ್ನು ನಿಲ್ಲಿಸಿ~ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡ್ದ್ದಿದಾರೆ.

ಮೆರವಣಿಗೆಯು ಸಾಗುವ ಮಾರ್ಗಗಳಲ್ಲಿ ಅಲ್ಲಿನ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಿದೆ.ಮೆರವಣಿಗೆ ತಡೆ

ಪಾಕಿಸ್ತಾನ ಸೇನೆಯು ಇಮ್ರಾನ್ ಖಾನ್ ನೇತೃತ್ವದ ಎರಡನೇ ಹಂತದ ಮೆರವಣಿಗೆಯನ್ನು ಬುಡಕಟ್ಟು ಪ್ರದೇಶದ ಸಮೀಪದಲ್ಲಿಯೇ  ತಡೆ ಹಿಡಿದಿದೆ.  ಸೇನೆಯ ಈ ಕ್ರಮದಿಂದ ಪೂರ್ವನಿಗದಿತ ಕೊಟಕಾಯಿ ಗ್ರಾಮದಲ್ಲಿ ನಡೆಯಬೇಕಾಗಿದ್ದ ಬಹಿರಂಗ ಸಭೆಯನ್ನು ರದ್ದುಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry