ಡ್ರೋಣ್ ದಾಳಿ: 18 ಉಗ್ರರ ಹತ್ಯೆ

ಸೋಮವಾರ, ಜೂಲೈ 22, 2019
27 °C

ಡ್ರೋಣ್ ದಾಳಿ: 18 ಉಗ್ರರ ಹತ್ಯೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ವಾಯವ್ಯ ಪಾಕಿಸ್ತಾನದ ಆಫ್ಘಾನಿಸ್ತಾನ ಗಡಿಯಲ್ಲಿ ಅಮೆರಿಕ ಪಡೆ ಗುರುವಾರ ನಡೆಸಿದ ಡ್ರೋಣ್ ದಾಳಿಗೆ ಕನಿಷ್ಠ 18 ಉಗ್ರರು ಹತ್ಯೆಯಾಗಿದ್ದಾರೆ.ಉಗ್ರರು ಪ್ರಯಾಣಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಅಮೆರಿಕ ನಾಲ್ಕು ಡ್ರೋಣ್ ದಾಳಿ ನಡೆಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಐವರು ಸಾವು: ಆಫ್ಘಾನಿಸ್ತಾನ ಮೂಲದ ತಾಲಿಬಾನ್ ಉಗ್ರರು ವಾಯವ್ಯ ಪಾಕಿಸ್ತಾನ ಬಜೂರು ಬುಡಕಟ್ಟು ಪ್ರಾಂತ್ಯದ ಗ್ರಾಮವೊಂದರ ಮೇಲೆ ನಡೆಸಿದ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry