ಢಮ್ಮಣಗಿ ಸ್ಮಾರ್ಟ್ ಹೋಮ್ಸ

7

ಢಮ್ಮಣಗಿ ಸ್ಮಾರ್ಟ್ ಹೋಮ್ಸ

Published:
Updated:
ಢಮ್ಮಣಗಿ ಸ್ಮಾರ್ಟ್ ಹೋಮ್ಸ

ಬೆಂಗಳೂರು ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಪ್ರಮುಖ ಐ.ಟಿ ಕಂಪೆನಿಗಳು, ಮಾನ್ಯತೆ ಪಡೆದ ಶೈಕ್ಷಣಿಕ ಮತ್ತು ಸಂಶೋಧನಾ  ಸಂಸ್ಥೆಗಳು ಇಲ್ಲಿವೆ.ನಗರದ ಹವಾಮಾನ ಮತ್ತು ಮೂಲಸೌಕರ್ಯ ವ್ಯವಸ್ಥೆ ಉತ್ತಮವಾಗಿರುವುದರಿಂದ ಇದು ಅತ್ಯುತ್ತಮ ವಾಸಯೋಗ್ಯ ನಗರವೂ ಹೌದು. ನೈಸರ್ಗಿಕ ಹಸಿರಿನ ಚೆಲುವು ಮತ್ತು ಸೌಂದರ್ಯದಿಂದ ಬೆಂಗಳೂರು ನಿವೇಶನ ಖರೀದಿದಾರರಿಗೆ ಮತ್ತು ರಿಯಲ್‌ಎಸ್ಟೇಟ್ ಹೂಡಿಕೆದಾರರಿಗೆ `ಕನಸಿನ~ ತಾಣವಾಗಿದೆ.ಮೂಲಸೌಕರ್ಯ ಸರಿಯಾದ ರೀತಿಯಲ್ಲಿ ಅಭಿವೃದ್ಧಿಗೊಂಡಿರುವುದರಿಂದ ಬೆಂಗಳೂರಿನಲ್ಲಿ ಸ್ಥಿರಾಸ್ತಿ ಬೇಡಿಕೆ ಹೆಚ್ಚುತ್ತಿದೆ. ಹೂಡಿಕೆದಾರರಿಗೆ ಹಾಗೂ ಇತರೆ ವಾಣಿಜ್ಯ ವಹಿವಾಟುಗಳಿಗೂ ನಗರವು ಪ್ರಶಸ್ತ ಸ್ಥಳವಾಗಿದೆ.ಇತ್ತೀಚಿನ ವರ್ಷಗಳಲ್ಲಿ ನಗರದ ಕನಕಪುರ ರಸ್ತೆಗೆ ಹೊಂದಿಕೊಂಡಂತೆ ರಿಯಲ್ ಎಸ್ಟೇಟ್ ವ್ಯವಹಾರಗಳು ಅತ್ಯುತ್ತಮ ಪ್ರಗತಿ ಕಂಡಿವೆ. ಬನಶಂಕರಿಯಿಂದ ಜಯನಗರದ ಮೂಲಕ ಮಹಾತ್ಮ ಗಾಂಧಿ ರಸ್ತೆಯನ್ನು ಸಂಪರ್ಕಿಸುವ `ಮೆಟ್ರೊ~ ಕಾಮಗಾರಿ ತೀವ್ರಗತಿ ಪಡೆದುಕೊಂಡ ಮೇಲಂತೂ ಇಲ್ಲಿನ ರಿಯಲ್ ಎಸ್ಟೇಟ್ ವಹಿವಾಟಿನ ಚಿತ್ರಣವೇ ಬದಲಾಗಿದೆ.ರಿಯಲ್ ಎಸ್ಟೇಟ್ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲೊಂದಾದ `ಢಮ್ಮಣಗಿ ಡೆವಲಪರ್ಸ್~ ವಾಸ ಅಥವಾ ವಾಣಿಜ್ಯ ಉದ್ದೇಶಕ್ಕೆ ಗುಣಮಟ್ಟದ ವಸತಿ ಅಥವಾ ಕಚೇರಿ ಸ್ಥಳಾವಕಾಶ ಒದಗಿಸುವುದರಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದೆ.`ಇಂಟೆಲಿಜೆಂಟ್ ಹೋಮ್ಸ~ ಪರಿಕಲ್ಪನೆಯಡಿ `ಲೀವ್ಸ್~ ಎಂಬುದು ಇತ್ತೀಚಿನ ಹೊಸ ಯೋಜನೆ. ಕನಕಪುರ ಮುಖ್ಯ ರಸ್ತೆಯಲ್ಲಿರುವ ಈ ಯೋಜನೆ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿಗೆ, ಆಸ್ಪತ್ರೆಗೆ, ವಾಣಿಜ್ಯ ಕೇಂದ್ರಗಳಿಗೆ ಸಮೀಪದ ಪ್ರದೇಶದಲ್ಲಿಯೇ ಇದೆ.`ಸ್ಮಾರ್ಟ್ ಹೋಮ್~ ವಸತಿಗಳು ಎಲ್ಲ ಬಗೆಯ ಸೌಕರ್ಯ, ಅನುಕೂಲ ಹಾಗೂ ಭದ್ರತೆ ಒದಗಿಸುವಂತಿವೆ ಎನ್ನುತ್ತಾರೆ ಸಂಸ್ಥೆಯ ಬಾಬು ಎ.ಢಮ್ಮಣಗಿ.ವಿಶ್ವದರ್ಜೆ ಗುಣಮಟ್ಟ ಮತ್ತು ಭದ್ರತೆ ಹೊಂದಿರುವ ಇಲ್ಲಿನ ಪ್ರತಿಫ್ಲಾಟ್‌ಸಹ ವಿವಿಧ ಬಗೆಯ ಸೆನ್ಸರ್‌ಗಳಿಂದ ಸುಸಜ್ಜಿತವಾಗಿದೆ. ಮನೆಯೊಳಗೆ ಅಪರಿಚಿತ ವ್ಯಕ್ತಿಗಳು, ಕಳ್ಳರು ಪ್ರವೇಶಿಸಿದರೆ ಇಲ್ಲಿ ಅಳವಡಿಸಲಾಗಿರುವ ಮೋಷನ್ ಡಿಟೆಕ್ಟರ್ಸ್ ಪತ್ತೆ ಮಾಡಿ ಮನೆ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

 

ಮನೆಯೊಳಗೆ ಅಗ್ನಿ ಅನಾಹುತವೇನಾದರೆ ಶಾಖ ಸಂವೇದಿ ಸಾಧನ ತಕ್ಷಣವೇ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಎಚ್ಚರಿಕೆ ಸೂಚನೆ ನೀಡುತ್ತದೆ.

 

ಅಡುಗೆ ಅನಿಲ ಸೋರಿಕೆ ಪತ್ತೆ ಸೆನ್ಸರ್‌ಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಮನೆಯ ಮುಖ್ಯದ್ವಾರದ ಎಲೆಕ್ಟ್ರಿಕ್ ಲಾಕ್‌ಗಳನ್ನು ಎಲ್ಲಿಂದ ಬೇಕಾದರೂ ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದಾಗಿದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ ಎನ್ನುತ್ತಾರೆ ಢಮ್ಮಣಗಿ.ಜತೆಗೆ ಈಜುಕೊಳ, ಮಕ್ಕಳ ಆಟದ ಮೈದಾನ, ವ್ಯಾಯಾಮ ಶಾಲೆ, ಮಹಡಿ ಉದ್ಯಾನ, ಜಾಗರ್ಸ್ ಟ್ರ್ಯಾಕ್, ಹಿರಿಯ ನಾಗರೀಕರ ಪ್ರದೇಶ, ಕ್ಲಬ್ ಹೌಸ್ -ಕಾನ್ಫರೆನ್ಸ್ ಪಾರ್ಟಿ ಹಾಲ್, ಗ್ರಂಥಾಲಯ ಮೊದಲಾದ ಮೌಲ್ಯವರ್ಧಿತ ಸೌಕರ್ಯಗಳೂ ಇಲ್ಲಿವೆ ಎನ್ನುವುದು ಢಮ್ಮಣಗಿ ಅವರ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry