`ಢುಂಢಿ' ಮಾರಾಟ: ತಡೆಯಾಜ್ಞೆ ತೆರವಿಗೆ ಲೇಖಕನ ಅರ್ಜಿ

7

`ಢುಂಢಿ' ಮಾರಾಟ: ತಡೆಯಾಜ್ಞೆ ತೆರವಿಗೆ ಲೇಖಕನ ಅರ್ಜಿ

Published:
Updated:

ಬೆಂಗಳೂರು: `ಢುಂಢಿ` ಪುಸ್ತಕ ಮಾರಾಟಕ್ಕೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಲೇಖಕ ಯೋಗೇಶ್ ಮಾಸ್ಟರ್ ನಗರದ 38ನೇ ಸೆಷನ್ಸ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿದೆ.ಕೃತಿಯಲ್ಲಿ ಗಣಪತಿಯ ಬಗ್ಗೆ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ. ಕೆಲ ಮಾಧ್ಯಮಗಳು ಇಲ್ಲದ ಸುದ್ದಿ ಪ್ರಕಟಿಸಿ ವಿವಾದ ಹುಟ್ಟು ಹಾಕಿವೆ. ಹೀಗಾಗಿ ಕೃತಿಯ ಮಾರಾಟಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಎಂದು ಯೋಗೇಶ್ ಮಾಸ್ಟರ್ ಕೋರಿದ್ದಾರೆ.ಕೃತಿಯಲ್ಲಿ ಗಣಪತಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿರುವುದರಿಂದ ಪುಸ್ತಕದ ಮಾರಾಟ ಹಾಗೂ ಮುದ್ರಣಕ್ಕೆ ತಡೆ ನೀಡಬೇಕು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಕೃತಿ ಮಾರಾಟ ಮತ್ತು ಮುದ್ರಣಕ್ಕೆ ತಡೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry