ತಂಗುದಾಣ ಬೇಕು

ಮಂಗಳವಾರ, ಜೂಲೈ 23, 2019
27 °C

ತಂಗುದಾಣ ಬೇಕು

Published:
Updated:

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿರುವ ಕೊಡಿಗೇಹಳ್ಳಿ ಗೇಟ್ ಬಸ್ಸು ನಿಲ್ದಾಣದಲ್ಲಿದ್ದ ತಂಗುದಾಣವನ್ನು ಒಡೆದುಹಾಕಿ 4-5 ವರ್ಷವಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ನಿಲ್ಲಲು ಆಗುವುದೇ ಇಲ್ಲ.

ವಯಸ್ಸಾದವರು, ಹೆಂಗಸರು ಹಾಗೂ ಶಾಲೆಗೆ ಹೋಗುವ ಮಕ್ಕಳಿಗಂತೂ ಬಸ್ಸಿಗೆ ಓಡಿಹೋಗಿ ಹತ್ತುವುದು ಯಮ ಯಾತನೆ. ಈ ಸಮಸ್ಯೆ ಬಗ್ಗೆ ಮಹಾನಗರಪಾಲಿಕೆ ಮತ್ತು ಪೊಲೀಸರಿಗೆ ಅನೇಕ ಸಲ ತಿಳಿಸಿದರೂ ಪ್ರಯೋಜನವಾಗಿರುವುದಿಲ್ಲ.

ಸಂಬಂಧಪಟ್ಟ ಅಧಿಕಾರಿಗಳೂ ಇನ್ನಾದರೂ ಗಮನಹರಿಸಿ ಕನಿಷ್ಠಪಕ್ಷ ತಾತ್ಕಾಲಿಕವಾಗಿಯಾದರೂ ಒಂದು ಜಿಂಕ್‌ಷೀಟ್ ಬಸ್ ತಂಗುದಾಣವನ್ನು, ಕೊಡಿಗೇಹಳ್ಳಿ ಗೇಟ್ ಬಳಿ (ಯಲಹಂಕ ಕಡೆಗೆ ಹೋಗುವ ಮಾರ್ಗ) ಮಳೆಗಾಲ ಪ್ರಾರಂಭವಾಗುವುದರ ಒಳಗೆ ಮುನ್ನ ನಿರ್ಮಾಣ ಮಾಡಿಕೊಡಬೇಕೆಂದು ವಿನಂತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry