ಬುಧವಾರ, ನವೆಂಬರ್ 13, 2019
18 °C
ಕೊಹ್ಲಿ ನಾಯಕತ್ವಕ್ಕೆ ಡಿವಿಲಿಯರ್ಸ್ ಮೆಚ್ಚುಗೆ

`ತಂಡದಲ್ಲಿ ತುಂಬಾ ಸುಧಾರಣೆ ಆಗಿದೆ'

Published:
Updated:

strong>ಬೆಂಗಳೂರು: `ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ವರ್ಷ ತುಂಬಾ ಸುಧಾರಣೆ ಆಗಿದೆ. ಅದರಲ್ಲೂ ಬೌಲಿಂಗ್‌ನಲ್ಲಿ ತಂಡ ಶಕ್ತಿಯುತವಾಗಿದೆ. ಇದು ಬ್ಯಾಟ್ಸ್‌ಮನ್‌ಗಳ ವಿಶ್ವಾಸ ಹೆಚ್ಚಿಸಿದೆ. ಉಳಿದ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ನಾವು ಸ್ಥಿರ ಪ್ರದರ್ಶನ ತೋರುತ್ತಿದ್ದೇವೆ' ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ಆಡಲಿರುವ ಚಾಲೆಂಜರ್ಸ್ ಆಟಗಾರರು ಗುರುವಾರ ಕಠಿಣ ತಾಲೀಮು ನಡೆಸಿದರು.`ನಮ್ಮದು ಉತ್ತಮ ತಂಡ. ಆದರೆ ಟ್ರೋಫಿ ಗೆಲ್ಲಲು ನಮಗೆ ಸಾಧ್ಯವಾಗಿಲ್ಲ. ಈ ಕಾರಣ ಆರನೇ ಆವೃತ್ತಿಯ ಟೂರ್ನಿ ನಮ್ಮ ಪಾಲಿಗೆ ತುಂಬಾ ಮಹತ್ವದ್ದು. ಈ ಬಾರಿ ಉತ್ತಮ ಆರಂಭ ಲಭಿಸಿದೆ. ಹಿಂದೆಂದಿಗಿಂತಲೂ ಚೆನ್ನಾಗಿ ಆಡುತ್ತಿದ್ದೇವೆ. ಅದನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು' ಎಂದು ಡಿವಿಲಿಯರ್ಸ್ ನುಡಿದಿದ್ದಾರೆ.ಈ ಟೂರ್ನಿಯಲ್ಲಿ ತಂಡ ಮುನ್ನಡೆಸುತ್ತಿರುವ ಅತಿ ಕಿರಿಯ ನಾಯಕ ಎನಿಸಿರುವ ವಿರಾಟ್ ಕೊಹ್ಲಿ ಬಗ್ಗೆ ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಮೆಚ್ಚುಗೆ ಮಾತುಗಳನ್ನು ಹರಿಬಿಟ್ಟರು. `ಕೊಹ್ಲಿ ಅವರಿಗೆ ಇನ್ನೂ 24 ವರ್ಷ ವಯಸ್ಸು. ನಾಯಕತ್ವದ ಅನುಭವ ಕೂಡ ಇಲ್ಲ. ಆದರೆ ಉತ್ತಮ ರೀತಿಯಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲೂ ಅಮೋಘ ಪ್ರದರ್ಶನ ತೋರುತ್ತಿದ್ದಾರೆ' ಎಂದಿದ್ದಾರೆ.

ಪ್ರತಿಕ್ರಿಯಿಸಿ (+)