ತಂತಿ ಬೇಲಿಗೆ ಸಿಲುಕಿ ಚಿರತೆ ಸಾವು

7

ತಂತಿ ಬೇಲಿಗೆ ಸಿಲುಕಿ ಚಿರತೆ ಸಾವು

Published:
Updated:
ತಂತಿ ಬೇಲಿಗೆ ಸಿಲುಕಿ ಚಿರತೆ ಸಾವು

ಬಾಳೆಹೊನ್ನೂರು: ಸಮೀಪದ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಪಾಲ್ ಸಮೀಪದ ತಟ್ಟಿಖಾನ್ ಎಂಬ ಗ್ರಾಮದಲ್ಲಿ ಚಿರತೆಯೊಂದು ಕಾಫಿ ತೋಟದ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿದೆ.ಚಿರತೆಯ ಮೈಮೇಲೆ ಗಾಯಗಳಾಗಿದ್ದು, ದೇಹದ ಸ್ವಲ್ಪ ಮಾಂಸವನ್ನು ಯಾವುದೋ ಕಾಡುಪ್ರಾಣಿ ಕಿತ್ತು ತಿಂದಂತೆ ಕಾಣುತ್ತಿದೆ. ಚಿರತೆಗೆ ಎರಡು ವರ್ಷ ಎಂದು ಅಂದಾಜಿಸಲಾಗಿದೆ. ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ರಂಗಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry