ತಂತ್ರಜ್ಞರ ಸಂಖ್ಯೆ 100ಕ್ಕೆ ‘ಜಿಕೆಎನ್‌ ಏರೋಸ್ಪೇಸ್‌’

7

ತಂತ್ರಜ್ಞರ ಸಂಖ್ಯೆ 100ಕ್ಕೆ ‘ಜಿಕೆಎನ್‌ ಏರೋಸ್ಪೇಸ್‌’

Published:
Updated:

ಬೆಂಗಳೂರು: ಬ್ರಿಟನ್‌ ಮೂಲದ ‘ಜಿಕೆಎನ್‌ ಏರೋಸ್ಪೇಸ್‌’ ಭಾರತ­ದಲ್ಲಿನ ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಬುಧವಾರ ಆರಂಭಿಸಿದೆ.ಕಚೇರಿ ಉದ್ಘಾಟನೆ ನಂತರ ಸುದ್ದಿಗಾ ರರ ಜತೆ ಮಾತನಾಡಿದ ‘ಜಿಕೆಎನ್‌ ಏರೋಸ್ಪೇಸ್‌ ಇಂಡಿಯಾ’  ಪ್ರಧಾನ ವ್ಯವಸ್ಥಾಪಕ ಡೇವಿಡ್‌ ಓರ್ಥ್‌, ಬೆಂಗ ಳೂರು ಕಚೇರಿಯಲ್ಲಿ 70 ಮಂದಿ ತಂತ್ರ ಜ್ಞರಿದ್ದು, ವರ್ಷದೊಳಗೆ 100ಕ್ಕೆ ಹೆಚ್ಚಿಸ ಲಾಗುವುದು. ಇಲ್ಲಿ ವೈಮಾನಿಕ ಎಂಜಿನಿ ಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿ ಸಂಶೋ ಧನೆ ಮತ್ತು ಅಭಿವೃದ್ಧಿ ಚಟುವಟಿಕೆ ನಡೆಯುತ್ತದೆ ಎಂದರು.1993ರಲ್ಲಿ ಆರಂಭವಾದ ‘ಜಿಕೆಎನ್‌ ಏರೋಸ್ಪೇಸ್‌’ 9 ದೇಶ­ಗಳಲ್ಲಿ 30 ಘಟಕ ಮತ್ತು 11,300 ಸಿಬ್ಬಂ­ದಿಯನ್ನೂ ಹೊಂದಿದೆ.ಎಂಜಿನ್‌ ಸ್ಟ್ರಕ್ಚರ್‌, ಏರ್‌ ಫ್ರೇಮ್‌ ಸೇರಿ­ದಂತೆ ನಾಲ್ಕು ಬಗೆ ಉತ್ಪನ್ನ ಗಳನ್ನು ವೈಮಾನಿಕ ಕ್ಷೇತ್ರದ ಕಂಪೆನಿಗಳಿಗೆ ಒದಗಿಸುತ್ತಿದೆ.2012­ರಲ್ಲಿ 177.50 ಕೋಟಿ ಪೌಂಡ್‌ ಸ್ಟರ್ಲಿಂಗ್‌(ಅಂದಾಜು ₨17,750 ಕೋಟಿ) ಮಾರಾಟ ವರಮಾನ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry